ದ.ಕ.ಜಿಲ್ಲೆ : ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲು ಸ್ಥಾನ ಪ್ರಕಟ

Update: 2021-01-03 14:59 GMT

ಮಂಗಳೂರು, ಜ. 3: ಇತ್ತೀಚೆಗೆ ನಡೆದ ಗ್ರಾಪಂಗಳಿಗೆ ಚುನಾವಣೆಯಲ್ಲಿ ವಿಜೇತರಾದವರ ಪೈಕಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯ ಬೇಕಿದ್ದು, ಅದಕ್ಕೆ ಪೂರ್ವಭಾವಿಯಾಗಿ ತಾಲೂಕುಗಳ ವರ್ಗವಾರು ಪಟ್ಟಿಯನ್ನು ರಾಜ್ಯ ಸರಕಾರ ಪ್ರಕಟಿಸಿದೆ. ಇವುಗಳಲ್ಲಿ ಶೇ.50ರಷ್ಟು ಮಹಿಳಾ ಮೀಸಲಾತಿ ಆಗಿದ್ದು, ಆವರಣದ ಒಳಗಡೆ ಮಹಿಳಾ ಮೀಸಲಾತಿ ಸಂಖ್ಯೆಯನ್ನು ನೀಡಲಾಗಿದೆ.

ಮಂಗಳೂರು ತಾಲೂಕಿನ 37 (19) ಗ್ರಾಪಂನಲ್ಲಿ 2 (1) ಅನುಸೂಚಿತ ಜಾತಿ, 1(1) ಅನುಸೂಚಿನ ಪಂಗಡ, 10 (5) ಹಿಂದುಳಿದ ವರ್ಗ ಎ, 2(1) ಹಿಂದುಳಿದ ವರ್ಗ ಬಿ ಹಾಗೂ 22(11) ಸಾಮಾನ್ಯ.

ಮೂಡುಬಿದಿರೆ ತಾಲೂಕಿನ 12 (6) ಗ್ರಾಪಂನಲ್ಲಿ 1 (1) ಅನುಸೂಚಿತ ಜಾತಿ, 1 (1) ಅನುಸೂಚಿತ ಪಂಗಡ, 3 (2) ಹಿಂದುಳಿದ ವರ್ಗ ಎ, 1 (0) ಹಿಂದುಳಿದ ವರ್ಗ ಬಿ ಹಾಗೂ 6 (2) ಸಾಮಾನ್ಯ.

ಬಂಟ್ವಾಳ ತಾಲೂಕಿನ 58 (29) ಗ್ರಾಪಂನಲ್ಲಿ 3 (2) ಅನುಸೂಚಿತ ಜಾತಿ, 3(2) ಅನುಸೂಚಿನ ಪಂಗಡ, 15(8) ಹಿಂದುಳಿದ ವರ್ಗ ಎ, 4(2) ಹಿಂದುಳಿದ ವರ್ಗ ಬಿ ಹಾಗೂ 33 (15) ಸಾಮಾನ್ಯ.

ಬೆಳ್ತಂಗಡಿ ತಾಲೂಕಿನ 48 (24) ಗ್ರಾಪಂನಲ್ಲಿ 4(2) ಅನುಸೂಚಿತ ಜಾತಿ, 2(1) ಅನುಸೂಚಿನ ಪಂಗಡ, 13(6) ಹಿಂದುಳಿದ ವರ್ಗ ಎ, 3 (2)ಹಿಂದುಳಿದ ವರ್ಗ ಬಿ ಹಾಗೂ 26(13) ಸಾಮಾನ್ಯ.

ಪುತ್ತೂರು ತಾಲೂಕಿನ 22 (11) ಗ್ರಾಪಂನಲ್ಲಿ 3 (2) ಅನುಸೂಚಿತ ಜಾತಿ, 2 (1) ಅನುಸೂಚಿನ ಪಂಗಡ, 5(2) ಹಿಂದುಳಿದ ವರ್ಗ ಎ, 1(1) ಹಿಂದುಳಿದ ವರ್ಗ ಬಿ ಹಾಗೂ 11(5) ಸಾಮಾನ್ಯ.

ಸುಳ್ಯ ತಾಲೂಕಿನ 25 (13) ಗ್ರಾಪಂನಲ್ಲಿ 3(2) ಅನುಸೂಚಿತ ಜಾತಿ, 2 (1) ಅನುಸೂಚಿನ ಪಂಗಡ, 6 (3) ಹಿಂದುಳಿದ ವರ್ಗ ಎ, 1(1) ಹಿಂದುಳಿದ ವರ್ಗ ಬಿ ಹಾಗೂ 13 (6) ಸಾಮಾನ್ಯ.

ಕಡಬ ತಾಲೂಕಿನ 21 (11) ಗ್ರಾಪಂನಲ್ಲಿ 2 (1) ಅನುಸೂಚಿತ ಜಾತಿ, 1 (1) ಅನುಸೂಚಿನ ಪಂಗಡ, 6 (3) ಹಿಂದುಳಿದ ವರ್ಗ ಎ, 1(1) ಹಿಂದುಳಿದ ವರ್ಗ ಬಿ ಹಾಗೂ 11 (5) ಸಾಮಾನ್ಯ.

ಈ ವರ್ಗಾವಾರು ಮೀಸಲಾತಿಯನ್ನು ಜಿಲ್ಲಾಧಿಕಾರಿ ಪರಿಶೀಲಿಸಿ ಪ್ರತಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News