ತೋಟಬೆಂಗ್ರೆಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ

Update: 2021-01-03 16:36 GMT

ಮಂಗಳೂರು, ಜ.3: ನಗರ ಹೊರವಲಯದ ತೋಟಬೆಂಗ್ರೆಯ ಪಲ್ಗುಣಿ ನದಿ ಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬೋಟ್‌ವೊಂದರ ಮಾಲಕ ಮಲ್ಲೂರಿನ ಅಬ್ದುಲ್ ಹಕೀಂ ಎಂಬವರು ಶನಿವಾರ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಮರಳಿ ಬರುವ ವೇಳೆ ತೋಟಬೆಂಗರೆ ಫಲ್ಗುಣಿ ನದಿಯಲ್ಲಿ ನವಜಾತ ಶಿಶುವಿನ ಮೃತದೇಹ ತೇಲುತ್ತಿದ್ದುದು ಕಂಡು ಬಂತು. ಯಕ್ಷಣ ಅವರು ಮೀನು ಕಾರ್ಮಿಕರಾದ ಫೈಝಲ್ ಮತ್ತು ರಹೀಂ ಅವರ ಸಹಕಾರದೊಂದಿಗೆ ಜಾಲಿಬಲೆಯ ಮೂಲಕ ನವಜಾತ ಶಿಶುವಿನ ಮೃತದೇಹವನ್ನು ನೀರಿನಿಂದ ತೆಗೆದು ಕಿನಾರೆಗೆ ತಂದಿದ್ದಾರೆ. ಎರಡು ದಿನಗಳ ಹಿಂದೆ ಹುಟ್ಟಿದ ಹೆಣ್ಣು ಮಗು ಇದಾಗಿದ್ದು, ಜನನದ ಬಳಿಕ ಯಾರೋ ಅಪರಿಚಿತರು ರಹಸ್ಯವಾಗಿ ಫಲ್ಗುಣಿ ನದಿಗೆ ಎಸೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News