ಪ್ರತ್ಯೇಕ ಪ್ರಕರಣ: ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ವಂಚನೆ

Update: 2021-01-03 17:00 GMT

ಮಂಗಳೂರು, ಜ. 3: ಸ್ಟೇಟ್‌ಬ್ಯಾಂಕ್ ಆ್ ಇಂಡಿಯಾದ ಲಾಲ್‌ಬಾಗ್ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವ ವ್ಯಕ್ತಿಯೊಬ್ಬರ ಖಾತೆಯಿಂದ ಶುಕ್ರವಾರ ಅಪರಿಚಿತರು ಬೆಳಗ್ಗೆ 8ರಿಂದ 8:15ರ ಮಧ್ಯೆ ಹಂತ ಹಂತವಾಗಿ 90,600 ರೂ. ಗಳನ್ನು ನಗದೀಕರಿಸಿ ಮೋಸ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಕೆನರಾ ಬ್ಯಾಂಕ್‌ನ ಕಾವೂರು ಶಾಖೆಯಲ್ಲಿ ಖಾತೆ ಹೊಂದಿರುವ ವ್ಯಕ್ತಿಯೊಬ್ಬರ ಖಾತೆಯಿಂದ ಅಪರಿಚಿತರು ಶುಕ್ರವಾರ ರಾತ್ರಿ 8:15ರಿಂದ ಶನಿವಾರ 8:15ರ ಮಧ್ಯೆ 80,000 ರೂ. ನಗದೀಕರಿಸಿ ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಎರಡೂ ಪ್ರಕರಣದ ಬಗ್ಗೆ ನಗರದ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News