ಎಂ.ಎಚ್. ಮುಹಮ್ಮದ್ ‌ಕುಂಞಿ ​ನಿಧನ

Update: 2021-01-04 05:09 GMT

ಮಂಗಳೂರು, ಜ. 4: ಮಂಜೇಶ್ವರ ಸಮೀಪದ ಮಚ್ಚಂಪಾಡಿ ನಿವಾಸಿ ಎಂ.ಎಚ್. ಮುಹಮ್ಮದ್ ಕುಂಞಿ (58) ರವಿವಾರ ರಾತ್ರಿ ನಗರದ ಖಾಸಗಿ  ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರಿಯರು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

'ವಾರ್ತಾಭಾರತಿ' ಪತ್ರಿಕಾ ಕಚೇರಿಯಲ್ಲಿ ‌ಉದ್ಯೋಗಿಯಾಗಿದ್ದ ಅವರು‌ ಈ ಹಿಂದೆ‌ ಕೆಲಕಾಲ ಗಲ್ಫ್‌ನಲ್ಲೂ ಉದ್ಯೋಗದಲ್ಲಿದ್ದರು. ಅತ್ಯಂತ ‌ಲವಲವಿಕೆಯಿಂದಿದ್ದ ಅವರ ರಕ್ತದೊತ್ತಡ ಕಡಿಮೆಯಾದ ಕಾರಣ ರವಿವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 12:30ಕ್ಕೆ ಕೊನೆಯುಸಿರೆಳೆದರು.

ಮೃತರ ದಫನ ಕಾರ್ಯವು ಇಂದು ಮಧ್ಯಾಹ್ನ ದೇರಳಕಟ್ಟೆ ಸಮೀಪದ ಬೆಳ್ಮ ರೆಂಜಾಡಿ ಕೇಂದ್ರ ಜುಮಾ‌ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News