ಮೇಘಮೈತ್ರಿ ಪುರಸ್ಕಾರ ಪ್ರದಾನ
Update: 2021-01-05 16:47 GMT
ಉಡುಪಿ, ಜ.5: ಮೇಘ ಮೈತ್ರಿ ಕನ್ನಡ ಮತ್ತು ಸಾಹಿತ್ಯ ವೇದಿಕೆ ಕಮತಗಿ ಬಾಗಲಕೋಟೆ ಜಿಲ್ಲೆ ಇವರ ಆಶ್ರಯದಲ್ಲಿ ರವಿವಾರ ನಡೆದ ತಾರೆಗಳ ಸಂಗಮ ಕಾರ್ಯಕ್ರಮದಲ್ಲಿ ಸಮಾಜ ಸೇವಕ, ಆಪತ್ಬಾಂದವ, ಉಡುಪಿ ಹೆಲ್ಪ್ಲೈನ್ ಅಧ್ಯಕ್ಷ ಮಹೇಶ್ ಪೂಜಾರಿ ಹೂಡೆಗೆ ಮೇಘಮೈತ್ರಿ ಪುರಸ್ಕಾರ ಮತ್ತು ಬಹು ಮುಖ ಪ್ರತಿಭೆ, ಚಿತ್ರ ಕಲಾವಿದ ನಿತಿನ್ ಆಚಾರ್ಯ ಕಾಡೂರು ಅವರಿಗೆ ಯುವ ಮೇಘಮೈತ್ರಿ ಪುರಸ್ಕಾರ ನೀಡಿ ಗೌರವಿಸಲಾಯಿತು.