ಮಂಗಳೂರು : ಎಜೆ ಕೌಶಲ್ಯ - ಸಿಮ್ಯುಲೇಶನ್ ಕೇಂದ್ರ ಆರಂಭ
ಮಂಗಳೂರು : ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್, ಮಂಗಳೂರು ಎ.ಜೆ. ಕೌಶಲ್ಯ ಮತ್ತು ಸಿಮ್ಯುಲೇಶನ್ ಕೇಂದ್ರವನ್ನು ಬುಧವಾರ ಪ್ರಾರಂಭಿಸಲಾಯಿತು.
ಎ.ಜೆ. ಕೌಶಲ್ಯ ಮತ್ತು ಸಿಮ್ಯುಲೇಶನ್ ಕೇಂದ್ರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರು ಎಜೆ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ದಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಕೌಶಲ್ಯ ಮತ್ತು ಸಿಮ್ಯುಲೇಶನ್ ಕೇಂದ್ರದ ಸ್ಥಾಪನೆಗಾಗಿ ಅಧ್ಯಕ್ಷರು ಮತ್ತು ನಿರ್ವಹಣಾ ಸದಸ್ಯರ ತೀವ್ರ ಆಸಕ್ತಿ ಮತ್ತು ಪರಿಶ್ರಮವನ್ನು ಶ್ಲಾಘಿಸಿದರು. ಎ.ಜೆ. ಸಮೂಹ ಸಂಸ್ಥೆಗಳ ಕೌಶಲ್ಯ ಮತ್ತು ಸಿಮ್ಯುಲೇಶನ್ ಕೇಂದ್ರದಲ್ಲಿ ಸುಧಾರಿತ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಕೌಶಲ್ಯಗಳು ವೈದ್ಯಕೀಯ ಮತ್ತು ಇತರ ಆರೋಗ್ಯ ವೃತ್ತಿಪರರಿಗೆ ಪ್ರಯೋಜನವನ್ನು ನೀಡುತ್ತವೆ. ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ವೈದ್ಯಕೀಯ ವೃತ್ತಿಪರರ ಕೊಡುಗೆಯನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಎ. ಜೆ. ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಡಾ. ಪ್ರಶಾಂತ್ ಮಾರ್ಲಾ ಮತ್ತು ಡಾ.ಅಮಿತಾ ಮಾರ್ಲಾ, ನಿರ್ದೇಶಕರು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಮತ್ತು ಎ.ಜೆ. ಕಾಲೇಜಿನ ಡೀನ್ ಡಾ.ಅಶೋಕ್ ಹೆಗ್ಡೆ ಉಪಸ್ಥಿತರಿದ್ದರು.