‘ಮರ್ಕಝ್ ನಾಲೇಜ್ ಸಿಟಿ’ಯಿಂದ ‘ಪಿಜಿಡಿಎಲ್‌ಎಂ’ ಕೋರ್ಸ್‌ಗೆ ಅರ್ಜಿ ಆಹ್ವಾನ

Update: 2021-01-08 05:58 GMT

ಮಂಗಳೂರು, ಜ.7: ಕಲ್ಲಿಕೋಟೆಯ ‘ಮರ್ಕಝ್ ನಾಲೇಜ್ ಸಿಟಿ’ಯ ಅಧೀನದಲ್ಲಿರುವ ಹ್ಯಾಬಿಟಸ್ ಲೀಡರ್‌ಶಿಪ್ ಸ್ಕೂಲ್ ‘ಪಿಜಿಡಿಎಲ್‌ಎಂ’ ಕೋರ್ಸ್‌ಗೆ ಅರ್ಜಿ ಆಹ್ವಾನಿಸಿದೆ.

ಒಂದು ತಿಂಗಳ ಇಂಟರ್ನಿಶಿಪ್‌ನೊಂದಿಗೆ ಮೂರು ತಿಂಗಳ ‘ಪಿಜಿಡಿಎಲ್‌ಎಂ’ ಕೋರ್ಸ್‌ಗೆ ಯಾವುದೇ ಪದವಿ ಪಡೆದ ವಿದ್ಯಾರ್ಥಿಯು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜನವರಿ 26 ಕೊನೆಯ ದಿನಾಂಕವಾಗಿರುತ್ತದೆ. ಫೆಬ್ರವರಿ ಪ್ರಥಮ ವಾರದಲ್ಲಿ ತರಗತಿಯನ್ನು ಆರಂಭಿಸಲಾ ಗುವುದು ಎಂದು ಕೋರ್ಸ್‌ನ ಸಂಯೋಜನ ಮುಹಮ್ಮದ್ ರಿಫಾಯ್ ಮಂಗಳೂರು ತಿಳಿಸಿದ್ದಾರೆ.

2021ನೆ ಶೈಕ್ಷಣಿಕ ವರ್ಷದ ಪ್ರಥಮ ಬ್ಯಾಚ್‌ನ ಈ ಕೋರ್ಸ್ ನಿರಂತರವಾಗಿ (ಸುಮಾರು 800ರಿಂದ 1,000 ಗಂಟೆಗಳ ಅವಧಿ) ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ: 9142807807 ಅಥವಾ 9142804804 (ಕರೆ ಮತ್ತು ವಾಟ್ಸ್‌ಆ್ಯಪ್)ನ್ನು ಸಂಪರ್ಕಿಸಬಹುದಾಗಿದೆ.

*ಕೋರ್ಸ್‌ನ ಉದ್ದೇಶ

*ಯಾವುದೇ ಸಂಸ್ಥೆಗಳನ್ನು ಮುಂದೆ ನಿಂತು ನಡೆಸುವ ಸಾಮರ್ಥ್ಯ ಹೊಂದುವ 21ನೇ ಶತಮಾನದ ಕೌಶಲದೊಂದಿಗೆ ಭವಿಷ್ಯದ ಬದಲಾ ವಣೆಯ ನಿರ್ಮಾತೃಗಳನ್ನು ರೂಪಿಸುವ ಉದ್ದೇಶವನ್ನು ಈ ಕೋರ್ಸ್ ಹೊಂದಿದೆ.
*ವಿಮರ್ಶಾತ್ಮಕ ಚಿಂತನೆ ಹಾಗೂ ವೈಚಾರಿಕ ನಿರ್ಧಾರ ಕೈಗೊಳ್ಳುವ ಕೌಶಲವನ್ನು ಬೆಳೆಸಿಕೊಳ್ಳಲಿದ್ದಾರೆ.
*ಬಿಕ್ಕಟ್ಟಿಗೆ ತಕ್ಷಣ ಪ್ರತಿಕ್ರಿಯೆ ಮತ್ತು ಸಮಸ್ಯೆಗಳನ್ನು ವಿವೇಚನಾಯುತವಾಗಿ ಪರಿಹರಿಸುವ ಸಾಮರ್ಥ್ಯ ಗಳಿಸಲಿದ್ದಾರೆ.
*ಸ್ವತಃ ಒಂದು ಸಂಸ್ಥೆಯನ್ನು ಮುನ್ನೆಡೆಸುವ ನೈಪುಣ್ಯತೆ ತೋರಲಿದ್ದಾರೆ ಮತ್ತು ಸ್ವತಂತ್ರವಾಗಿ ಮುನ್ನಡೆಸಲಿದ್ದಾರೆ.
*ಇಂಗ್ಲಿಷ್ ನ‌ಲ್ಲಿ ಉತ್ತಮ ಸಂವಹನ ಮತ್ತು ಪರಿಣತಿ ಹೊಂದಲಿದ್ದಾರೆ.
*ನೈತಿಕ ದೃಢತೆ ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ.
*ಸೈಕೋಪಾಥೋಲಜಿ ಹಾಗೂ ಕಲಿಕೆಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಲಿದ್ದಾರೆ.
*ಮನಃಶಾಸ್ತ್ರೀಯ ಸಮಸ್ಯೆಗಳನ್ನು ಗುರುತಿಸುವ ಕಲೆ ಹಾಗೂ ಅದನ್ನು ಮನಃಶಾಸ್ತ್ರಜ್ಞರು/ಮನೋವೈದ್ಯರಿಗೆ ಶಿಫಾರಸು ಮಾಡುವ ಸಾಮರ್ಥ್ಯ.
*ಶಿಕ್ಷಣ ಸಂಸ್ಥೆಗಳ ಸಂಪೂರ್ಣ ಹಣಕಾಸು ಹಾಗೂ ಶಿಕ್ಷಣ ತಜ್ಞರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದ್ದಾರೆ.
*ಅಕೌಂಟ್ ಹಾಗೂ ಅಕೌಂಟ್ ಸಾಫ್ಟ್‌ವೇರ್‌ನ ಪರಿಶೀಲನೆ ಮತ್ತು ವಿಶೇಷ ನಿಗಾ.
*ವೈಯಕ್ತಿಕ ಹಾಗೂ ವೃತ್ತಿಪರ ಜೀವನವನ್ನು ಸಮರ್ಥವಾಗಿ ಮುನ್ನಡೆಸಲು ಅವಕಾಶ
*ಕೌಟುಂಬಿಕ ಸಂಬಂಧ ವೃದ್ಧಿ
*ಸಾರ್ವಜನಿಕರೊಂದಿಗೆ ಸಂವಹನಾ ಕಲೆ
*ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಬಂಧ ವೃದ್ಧಿ.
*ನಾಯಕತ್ವದ ಗುಣ ಬೆಳೆಸಿಕೊಳ್ಳಲು ಅವಕಾಶ
*ಆರೋಗ್ಯ ಮತ್ತು ದೈಹಿಕ ಸುದೃಢತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News