'ಸಮರ್ಥ ಕಾವ್ಯವಾಚನ ಕವಿಗೂ ಕವಿತೆಗೂ ಘನತೆ' : ಚಿದಂಬರ ಬೈಕಂಪಾಡಿ

Update: 2021-01-09 09:33 GMT

ಮಂಗಳೂರು : 'ಕವಿತೆ ಕಟ್ಟುವುದು ಸಮರ್ಥವಾಗಿ ವಾಚನ ಮಾಡುವುದು ಒಂದು ಕಲೆ. ಕವಿತೆಯ ಆಂತರ್ಯವನ್ನು ಸಹೃದಯರಿಗೆ ಪ್ರಸ್ತುತ ಪಡಿಸಲು ಸಾಧ್ಯವಾಗದೇ ಇದ್ದರೆ ಕವಿತೆ ತನ್ನ ಅಂತ‌ ಅಂತಸತ್ವ, ಘನತೆಯನ್ನು ಕಳೆದುಕೊಳ್ಳುತ್ತದೆ' ಎಂದು ಹಿರಿಯ ಪತ್ರಕರ್ತ ಸಾಹಿತಿ ಚಿದಂಬರ ಬೈಕಂಪಾಡಿ ಅವರು ಅಭಿಪ್ರಾಯಪಟ್ಟರು.

ಅವರು ಮಂಗಳೂರಿನ ಕೊಂಚಾಡಿ ಶ್ರೀ ರಾಮ ಭಜನಾ ಮಂದಿರದ ಸಭಾಭವನದಲ್ಲಿ ಜರುಗಿದ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಂದರ್ಭ ನಡೆದ ಸಾಹಿತ್ಯ ಸಂಜೆಯ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪದಗ್ರಹಣ ಕಾರ್ಯಕ್ರಮವನ್ನು ಕವಿ ಹಸನ್ ಕುಂಜತ್ತಬೈಲ್ ದೀಪ ಬೆಳಗಿಸಿ ಉದ್ಘಾಟಿಸಿದರು.ಸಭಾಧ್ಯಕ್ಷತೆಯನ್ನು ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಪ್ರಾಶುಪಾಲರಾದ ಪ್ರೊ.ಕೃಷ್ಣಮೂರ್ತಿ ಅವರು ವಹಿಸಿ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕವಿ ಹರೀಶ ಸುಲಾಯ ಒಡ್ಡಂಬೆಟ್ಟು ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆಯವರು ನೂತನ ಅಧ್ಯಕ್ಷರಾದ ಕಾ.ವೀ.ಕೃಷ್ಣದಾಸ್  ಹಾಗೂ ಇತರ  ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿ ಶುಭ ಹಾರೈಸಿದರು.

ಕವಿಗೋಷ್ಠಿಯಲ್ಲಿ ಬದ್ರುದ್ದೀನ್ ಕೂಳೂರು, ಸುಧಾ ನಾಗೇಶ್, ರೇಮಂಡ್ ಡಿಕೂನಾ, ತೃಪ್ತಿ ಜಿ.ಕುಂಪಲ, ಎಂ.ಪಿ. ಬಶೀರ್ ಅಹಮ್ಮದ್ ಬಂಟ್ವಾಳ, ವ. ಉಮೇಶ ಕಾರಂತ್, ಅರ್ಚನಾ ಕುಂಪಲ,ರೇಖಾ ನಾರಾಯಣ್ ಪಕ್ಷಿಕೆರೆ, ಚಂದ್ರಿಕಾ ಕೈರಂಗಳ, ಸುಮಾ. ಎಸ್., ಬಾರ್ಕೂರು, ವಿಜೇಶ್ ದೇವಾಡಿಗ ಮಂಗಳಾದೇವಿ, ವಸುಧಾ ಮೂಳೂರು, ಕೆ.ಗೋಪಾಲ ಕೃಷ್ಣ ಭಟ್, ಆಕೃತಿ ಭಟ್, ಡಾ.ಸುರೇಶ್ ನೆಗಳಗುಳಿ, ಹಸನ್ ಕುಂಜತ್ತ ಬೈಲ್, ಅಸುಂತ ಡಿಸೋಜಾ ಬಜಾಲ್ ಮೊದಲಾದ ಕವಿ ಕವಯತ್ರಿಯರು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು. 

ಕಾರ್ಯಕ್ರಮದಲ್ಲಿ ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು, ಉಪಾಧ್ಯಕ್ಷರಾದ ಡಾ.ಅರುಣಾ ನಾಗರಾಜ್, ಕೋಶಾಧಿಕಾರಿ ಲತೀಶ್ ಎಂ. ಸಂಕೊಳಿಗೆ, ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕಿ ಲತಾ ಕೃಷ್ಣದಾಸ್, ಡಾ.ಸುರೇಶ್ ನೆಗಳಗುಳಿ, ಸಾಹಿತಿ ರಘು ಇಡ್ಕಿದು, ಶ್ರೀ ರಾಮ ಭಜನಾ ಮಂದಿರದ ಕಾರ್ಯದರ್ಶಿ ದಾಮೋದರ್ ಕೆ ಮೊದಲಾದವರು ಉಪಸ್ಥಿತರಿದ್ದರು. ರಿಯಾನ ಡಿಕೂನಾ, ರಜತ್ ಕೆ.ದಾಸ್,  ಕುಮಾರಿ ಲಹರಿ, ಕುಮಾರಿ ಸಿಂಚನಾ, ಕುಮಾರಿ ಅನಘ  ಸಹಕರಿಸಿದರು.
ಲತೀಶ್ ಸಂಕೊಳಿಗೆ ಸ್ವಾಗತಿಸಿದರು. ಡಾ.ಅರುಣಾ ನಾಗರಾಜ್ ಮತ್ತು ವಿಜಯಲಕ್ಷ್ಮೀ ಕಟೀಲು ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News