ಜ.11 : ಸಂಪ್ಯದಲ್ಲಿ ಎಸ್ಕೆಎಸೆಸೆಫ್ ಮುನ್ನಡೆ ಯಾತ್ರೆ ಸಮಾರೋಪ

Update: 2021-01-09 14:22 GMT

ಪುತ್ತೂರು : "ಅಸ್ತಿತ್ವ ಹಕ್ಕು ಯುವಜನತೆ ಮರಳಿ ಪಡೆಯುತ್ತಿದೆ" ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ಕೆಎಸೆಸೆಫ್ ಕೇಂದ್ರೀಯ ಸಮಿತಿ ವತಿಯಿಂದ ದೇಶಾದ್ಯಂತ ಡಿ.6 ರಿಂದ ಜ.26 ರ ವರೆಗೆ ನಡೆಯುತ್ತಿರುವ ಅಭಿಯಾನವು ಜ.11 ರಂದು ದ.ಕ.ಜಿಲ್ಲೆಯನ್ನು ತಲುಪಲಿದ್ದು, ಉಳ್ಳಾಲದಲ್ಲಿ ಸ್ವೀಕಾರ ಸಮಾರಂಭ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಪುತ್ತೂರಿನ ಸಂಪ್ಯದಲ್ಲಿ ನಡೆಯಲಿರುವ ಜಿಲ್ಲೆಯ ಸಮಾರೋಪ ಸಮಾರಂಭದಲ್ಲಿ ಪುತ್ತೂರಿನ ಪುತ್ತೂರು ವಲಯದಿಂದ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಎಸ್ಕೆಎಸೆಸೆಫ್ ಮುಖಂಡ ಅನೀಸ್ ಕೌಸರಿ ತಿಳಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದ ಕೋಮು ಸೌಹಾರ್ದತೆಯ ಪರಂಪರೆಯನ್ನು ನವ ತಲೆಮಾರಿಗೆ ಪರಿಚಯಿಸು ವುದು, ಸೌಹಾರ್ದತೆಗೆ ದಕ್ಕೆ ತರುತ್ತಿರುವ ಹಿತಶಕ್ತಿಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಭಾರತದಲ್ಲಿ ತಮ್ಮ ಹಕ್ಕು ಅಸ್ತಿತ್ವವನ್ನು ಉಳಿಸಿಕೊಳ್ಳಲು ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಅಭಿಯಾನದ ಅಂಗವಾಗಿ ನಾಲ್ಕು ಸಾವಿರ ಪ್ರಭಾಷಣಗಳು, 600 ಸೆಮಿನಾರ್‍ಗಳು, ಮಾನವ ಸರಪಳಿ ಕಾರ್ಯಕ್ರಮ ದೇಶಾದ್ಯಂತ ನಡೆಯು ತ್ತಿದೆ. ಸಮಾರೋಪ ಸಮಾರಂಭವನ್ನು ಕೇರಳ ಜಂಈಯ್ಯತ್ತುಲ್ ಉಲಮಾ ಅಧ್ಯಕ್ಷ ಮಹಮ್ಮದ್ ಜೆಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ವಿಷಯ ಮಂಡನೆ ಮಾಡಲಿದ್ದಾರೆ. ಖಾಝಿಗಳಾದ  ಅಹ್ಮದ್ ಮುಸ್ಲಿಯಾರ್, ಮುಶಾವರ ಸದಸ್ಯರಾದ ಬಿ.ಕೆ.ಅಬ್ದುಲ್ ಖಾದರ್ ಖಾಸಿಮಿ, ಝೈನುಲ್ ಅಬಿದೀನ್ ತಂಙಳ್ ದುಗ್ಗಲಡ್ಕ, ಅಲಿ ತಂಙಳ್ ಕುಂಬೋಳ್, ಝೈನುಲ್ ಅಬಿದೀನ್ ದಾರುಸ್ಸಲಾಂ ಬೆಳ್ತಂಗಡಿ, ಅಹ್ಮದ್ ಪೊಕೋಯ ತಂಙಳ್ ಪುತ್ತೂರು, ಸೆಯ್ಯದ್ ಅಮೀರ್ ತಂಙಳ್ ಕಿನ್ಯ, ಶಾಸಕರಾದ ಯು.ಟಿ.ಖಾದರ್, ಸತ್ತಾರ್ ಪಂದಲ್ಲೂರ್, ರಶೀದ್ ಫೈಝಿ ವೆಳ್ಳಾಯಕ್ಕೋಡು, ಅನೀಸ್ ಕೌಸರಿ, ತಾಜುದ್ದೀನ್ ದಾರಿಮಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‍ಕೆಎಸ್‍ಎಸ್‍ಎಫ್ ಮುಖಂಡರಾದ ಮುಹಮ್ಮದ್ ಮುಸ್ಲಿಯಾರ್ ಮುಂಡೋಲೆ, ತಾಜುದ್ದೀನ್ ರಹ್ಮಾನಿ, ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಅಶ್ರಫ್ ಮುಕ್ವೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News