ನಾಡಾಜೆ ದತ್ತಿನಿಧಿ ಪ್ರಶಸ್ತಿಗೆ ವಾದಿರಾಜ ಕಲ್ಲೂರಾಯ ಆಯ್ಕೆ

Update: 2021-01-09 14:56 GMT

ಮಂಗಳೂರು, ಜ.8: ವಿದ್ವಾಂಸರಾದ ನಾಡಾಜೆ ನರಸಿಂಹ ಶಾಸಿ ಅವರ ಹೆಸರಲ್ಲಿ ಸಾಹಿತ್ಯ ವಿಮರ್ಶೆಗಾಗಿ ಕೊಡಮಾಡುವ ‘ನಾಡಾಜೆ ದತ್ತಿನಿಧಿ ಪ್ರಶಸ್ತಿ’ಗೆ ವಾಮಂಜೂರು ಸಂತ ರೇಮಂಡ್ಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಆಯ್ಕೆಯಾಗಿದ್ದಾರೆ.

ವಾದಿರಾಜ ಕಲ್ಲೂರಾಯ ಅವರ ಯಕ್ಷಗಾನ ಪ್ರಸಂಗದಲ್ಲಿ ಕನ್ನಡ ಸಾಹಿತ್ಯ ಸೌಂದರ್ಯ ವಿಮರ್ಶಾ ಪ್ರಬಂಧ ಸಾಹಿತ್ಯಕ್ಕೆ ಈ ಪ್ರಶಸ್ತಿ ದೊರೆತಿದೆ. ಅಗರಿ ಶ್ರೀನಿವಾಸ ಭಾಗವತರು ಬರೆದ ದೇವೀ ಮಹಾತ್ಮೆ, ಧನಗುಪ್ತ ಮಹಾಬಲಿ, ಶಿಮಂತೂರು ನಾರಾಯಣ ಶೆಟ್ಟಿ ಅವರ ಕಟೀಲು ಕ್ಷೇತ್ರ ಮಹಾತ್ಮೆ, ಮಧೂರು ವೆಂಕಟಕೃಷ್ಣ ಅವರ ವೈಶಾಲಿನಿ ಪರಿಣಯ, ಗಣೇಶ ಕೊಲೆಕಾಡಿ ಅವರ ಶಬರಕುಮಾರ ಪ್ರಸಂಗದ ಸಾಹಿತ್ಯ ಸೌಂದ ರ್ಯದ ಬಗ್ಗೆ ವಾದಿರಾಜ ಅವರು ವಿಮರ್ಶಾ ಪ್ರಬಂಧ ಬರೆದಿದ್ದರು.

 ಜ. 17 ರಂದು ನಾಡಾಜೆ ಸಿರಿಮನೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಕಾರ್ಯಕ್ರಮ ನೇರಪ್ರಸಾರಗೊಳ್ಳಲಿದೆ. ಪ್ರಶಸ್ತಿ 10000 ರೂ. ನಗದು ಬಹುಮಾನವನ್ನೊಳಗೊಂಡಿದೆ. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಭಾಗವಹಿಸುವರು ಎಂದು ನಾಡಾಜೆ ಪ್ರತಿಷ್ಠಾನದ ಸಂಚಾಲಕ ವಿ. ಲಕ್ಷ್ಮೀನಾರಾಯಣ ಭಟ್ಟ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News