ಲಾರಿ ಪಲ್ಟಿ: ಚಾಲಕ ಮೃತ್ಯು

Update: 2021-01-10 16:30 GMT

ಬೈಂದೂರು, ಜ.10: ಲಾರಿಯೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ 3.30ರ ಸುಮಾರಿಗೆ ಬೈಂದೂರು ಸಮೀಪದ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಮೃತರನ್ನು ಮಹಾರಾಷ್ಟ್ರ ರಾಜ್ಯದ ರಾಮ್‌ಲಾಲ್ ಪವಾರ್(35) ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದ ಇನ್ನೊಬ್ಬರು ತೀವ್ರವಾಗಿ ಗಾುಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಹಾರಾಷ್ಟ್ರದಿಂದ ಮಂಗಳೂರು ಕಡೆಗೆ ಬೇಕರಿ ಸಾಮಾನು ಸಾಗಿಸುತ್ತಿದ್ದ ಲಾರಿಯು ಒತ್ತಿನೆಣೆ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಯಿ ತ್ತೆನ್ನಲಾಗಿದೆ. ಇದರಿಂದ ಲಾರಿಯಡಿಗೆ ಸಿಲುಕಿದ ಚಾಲಕ ಗಂಭೀರವಾಗಿ ಗಾಯ ಗೊಂಡು ಸ್ಥಳ ದಲ್ಲಿಯೇ ಮೃತಪಟ್ಟರು.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News