ಹೆಬ್ರಿ: ಮನೆಯಲ್ಲಿ ಕಳ್ಳತನ; ಪ್ರಕರಣ ದಾಖಲು

Update: 2021-01-11 16:28 GMT

ಹೆಬ್ರಿ, ಜ.11: ಜ.9ರಿಂದ ಇಂದು ಬೆಳಗ್ಗೆ 11 ಗಂಟೆ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮುಂದಿನ ಬಾಗಿಲಿನ ಚಿಲಕವನ್ನು ಮುರಿದು ಒಳನುಗ್ಗಿದ ಯಾರೋ ಕಳ್ಳರು, ಕೋಣೆಯ ಗೋಡ್ರೆಜ್‌ನ ಬಾಗಿಲನ್ನು ಬಲಾತ್ಕಾರವಾಗಿ ತೆರೆದು ಲಾಕರ್‌ನಲ್ಲಿರಿಸಿದ್ದ ಚಿನ್ನದ ನೆಕ್ಲೇಸ್ ಹಾಗೂ ಚಿನ್ನದ ಓಲೆ ಸೇರಿದಂತೆ ಅಂದಾಜು 1.50 ಲಕ್ಷ ರೂ.ವೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ವರಂಗ ಗ್ರಾಮ ಮುನಿಯಾಲು ಮುಟ್ಲುಪಾಡಿ ರಸ್ತೆಯ ಲೀಲಾವತಿ ಜೆ.ಆಚಾರ್ಯ ಅವರು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News