ಮಂಗಳೂರು: ಖಾತೆದಾರರ ಗಮನಕ್ಕೆ ಬಾರದಂತೆ ಹಣ ಎಗರಿಸಿದ ದುಷ್ಕರ್ಮಿಗಳು!

Update: 2021-01-11 16:42 GMT

ಮಂಗಳೂರು, ಜ.11: ಖಾತೆದಾರರ ಗಮನಕ್ಕೆ ಬಾರದಂತೆಯೇ ಎಟಿಎಂನಿಂದ ಹಣ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಸ್ಥಳೀಯ ವ್ಯಕ್ತಿಯೋರ್ವರು ಬ್ಯಾಂಕ್‌ವೊಂದರ ಕಂಕನಾಡಿ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಎಟಿಎಂ ಕಾರ್ಡ್ ಬಳಕೆ ಮಾಡುತ್ತಿದ್ದರು. ಜ.10ರಂದು ಅವರ ಗಮನಕ್ಕೆ ಬಾರದಂತೆಯೇ ಯಾರೋ ಅಪರಿಚಿತರು ಕುಲಶೇಖರ ಪೋಸ್ಟಲ್ ಎಟಿಎಂ ಮೂಲಕ ಅವರ ಖಾತೆಯಿಂದ 40,000 ರೂ. ನಗದೀಕರಿಸಿ ವಂಚಿಸಿದ್ದಾರೆ ಎಂದು ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News