ಮಣಿಪಾಲ: ಮಹಿಳಾ ಉತ್ಪನ್ನಗಳ ಪ್ರದರ್ಶನ, ಮಾರಾಟ ಉದ್ಘಾಟನೆ

Update: 2021-01-12 16:24 GMT

ಮಣಿಪಾಲ, ಜ.12: ಕೆನರಾ ಬ್ಯಾಂಕ್‌ನ ಮಣಿಪಾಲ ವೃತ್ತಕಚೇರಿ ವತಿಯಿಂದ ಮಣಿಪಾಲದಲ್ಲಿಂದು ಪ್ರಾರಂಭಗೊಂಡ ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ‘ಕೆನರಾ ಉತ್ಸವ’ವನ್ನು ಉಡುಪಿ ಜಿಪಂನ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕ ಗುರುದತ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆನರಾ ಬ್ಯಾಂಕ್ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಹಮ್ಮಿ ಕೊಂಡ ಈ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಪ್ರತಿ ವರ್ಷ ದೊಡ್ಡ ಮಟ್ಟದಲ್ಲಿ ಆಯೋಜಿಸುವಂತೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಮಹಾ ಪ್ರಬಂಧಕ ರಾದ ರಾಮಾ ನಾಯ್ಕಾ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲ ರಾದರೆ ಸಮಾಜ ಹಾಗೂ ದೇಶ ಸಬಲೀಕರಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಆರ್ಥಿಕ ಸಹಾಯ ನೀಡಲು ಮುಂಚೂಣಿಯಲ್ಲಿದೆ ಎಂದರು.

ಈ ಪ್ರದರ್ಶನ ಹಾಗೂ ಮಾರಾಟ ಮೇಳದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಉಪ ಮಹಾ ಪ್ರಬಂಧಕ ಪ್ರದೀಪ್ ಭಕ್ತ ಅವರು ಕಾರ್ಯಕ್ರಮದ ಉದ್ದೇಶ ಹಾಗೂ ಮುನ್ನೋಟಗಳನ್ನು ತಿಳಿಸಿದರು. ಉತ್ತಮ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರದ ಕುರಿತು ವಿವರಿಸಿದರು.

ಕೆನರಾ ಬ್ಯಾಂಕಿನ ಮಹಾಪ್ರಬಂಧಕ ಸಾಯಿರಾಮ್ ಹೆಗಡೆ, ಉಪ ಮಹಾ ಪ್ರಬಂಧಕಿ ಪದ್ಮಾವತಿ, ಸಹಾಯಕ ಮಹಾಪ್ರಬಂಧಕ ವಿಷ್ಣುದಾಸ್ ಭಟ್, ಶ್ರೀನಿವಾಸ, ರವಿಶಂಕರ್ ಭಟ್ ಮುಂತಾದವರು ಉಪಸ್ಥಿತರಿದ್ದರು.

ಪ್ರಬಂಧಕಿ ಸವಿತಾ ನಾಯಕ್ ಕಾರ್ಯಕ್ರಮ ನಿರೂಪಿಸಿ ಪ್ರತಿಭಾ ಪೈ ವಂದಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳಾ ಉದ್ಯಮಿಗಳು ತಯಾರಿಸಿದ ವಿವಿಧ ಉತ್ಪನ್ನಗಳು ಎರಡು ದಿನಗಳ ವೆುೀಳದಲ್ಲಿ ಪ್ರದರ್ಶನಗೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News