ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ : ವಾರ್ಷಿಕೋತ್ಸವ ಪ್ರಯುಕ್ತ ಭರ್ಜರಿ ಕೊಡುಗೆ

Update: 2021-01-12 16:34 GMT

ಉಡುಪಿ, ಜ.12: ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ ಎರಡನೇ ಮತ್ತು ಸುರತ್ಕಲ್ ಶಾಖೆಯ ಪ್ರಥಮ ವಾರ್ಷಿಕೋತ್ಸವ ಆಚರಣೆಯ ಪ್ರಯುಕ್ತ ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ.

ಎಲ್ಲಾ ವಿವಾಹ ಚಿನ್ನಾಭರಣಗಳ ಖರೀದಿಸುವ ಗ್ರಾಹಕರು ಮೇಕಿಂಗ್ ಚಾರ್ಜ್‌ನಲ್ಲಿ ಫ್ಲಾಟ್ ಶೇ.50ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಅದೇ ರೀತಿ ಗ್ರಾಹಕರು ಇತರ ಚಿನ್ನಾಭರಣಗಳನ್ನು ಕೂಡ ಕಡಿಮೆ ಮೇಕಿಂಗ್ ಚಾರ್ಜ್‌ನಲ್ಲಿ ಪಡೆಯಬಹುದು.

ಫೆದರ್ಲೈಟ್ ಬ್ಯಾಂಗಲ್ 4 ಗ್ರಾಂ ಮೇಲೆ ಕೇವಲ ಶೇ.2.9, ಬ್ರೈಡಲ್ ನೆಕ್ಲೇಸ್ ಕಮ್ ಬೆಲ್ಟ್ 24 ಗ್ರಾಂ ಮೇಲೆ ಕೇವಲ ಶೇ.3.9, ಕೊಲ್ಕತ್ತ ಬ್ರೈಡಲ್ ನೆಕ್ಲೇಸ್ 16 ಗ್ರಾಂ ಮೇಲೆ ಕೇವಲ ಶೇ.4.9, ಫೆದರ್ಲೈಟ್ ಬ್ರೈಡಲ್ ನೆಕ್ಲೇಸ್ 16 ಗ್ರಾಂ ಮೇಲೆ ಕೇವಲ ಶೇ.4.9, ಡೈಲಿವೇರ್ ಬಳೆ 6 ಗ್ರಾಂ ಮೇಲೆ ಕೇವಲ ಶೇ.5.9, ಡೈಲಿವೇರ್ ಚೈನ್ ಆ್ಯಂಡ್ ಆಂಕ್ಲೆಟ್ 16 ಗ್ರಾಂ ಮೇಲೆ ಕೇವಲ ಶೇ.5.9, ಬ್ರೈಡಲ್ ಬಾಂಬೆ ಬಳೆ 6 ಗ್ರಾಂ ಮೇಲೆ ಕೇವಲ ಶೇ.6.9, ಡೈಲಿ ವೇರ್ ಬ್ರಾಸ್ಲೈಟ್ 6 ಗ್ರಾಂ ಮೇಲೆ ಕೇವಲ ಶೇ.6.9 ಮೇಕಿಂಗ್ ಚಾರ್ಜ್ ವಿಧಿಸಲಾಗುತ್ತದೆ.

ಕನಿಷ್ಠ ಬಜೆಟ್ ಮತ್ತು ಕನಿಷ್ಠ ತೂಕದಲ್ಲಿ ಸಂಪೂರ್ಣ ಬ್ರೈಡಲ್ ಸೆಟ್‌ನ್ನು ‘ಬರ್ಕತ್ ಬ್ರೈಡಲ್ ಸೆಟ್’ ಎಂಬ ಪ್ಯಾಕೇಜ್ನೊಂದಿಗೆ ನೀಡಲಾಗುತ್ತಿದ್ದು, ಇದರಲ್ಲಿ ಕೇವಲ ಶೇ.5ರಷ್ಟು ಮಾತ್ರ ಮೇಕಿಂಗ್ ಚಾರ್ಜ್ ವಿಧಿಸಲಾಗುತ್ತದೆ. ಈ ಅತ್ಯಾಕರ್ಷಕ ರಿಯಾಯಿತಿ ಮತ್ತು ಅತ್ಯಾಕರ್ಷಕ ಖರೀದಿಯೊಂದಿಗೆ ವಿನ್ ಲಕ್ಕಿ ಡ್ರಾ ಕೂಡ ನಡೆಯುತ್ತಿದೆ.

ದೈನಂದಿನ 2 ಅದೃಷ್ಟ ವಿಜೇತರಿಗೆ ಕುಕ್ಕರ್, ವಾರದ 2 ಅದೃಷ್ಟ ವಿಜೇತರಿಗೆ ಗ್ರೈಂಡರ್ ಅಥವಾ ಮಿಕ್ಸಿ ಹಾಗೂ ಮೆಗಾ ಡ್ರಾದಲ್ಲಿ 2 ಅದೃಷ್ಟ ವಿಜೇತರಿಗೆ ಟಿವಿಎಸ್ ಸ್ಕೂಟಿ ನೀಡಲಾಗುವುದು. ಈ ವಾರ್ಷಿಕೋತ್ಸವದ ಕೊಡುಗೆಗಳು ಮಾ.31ರವರೆಗೆ ಲಭ್ಯ ಇರುತ್ತದೆ.

1992ರಲ್ಲಿ ಆರಂಭಗೊಂಡ ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಕರ್ನಾಟಕ ಮತ್ತು ಕೇರಳದಾದ್ಯಂತ 9 ಮಳಿಗೆಗಳು ಮತ್ತು 3 ವಾಚ್ ಮಳಿಗೆಗಳನ್ನು ಹೊಂದಿದೆ ಎಂದು ಸುಲ್ತಾನ್ ಗ್ರೂಪ್ ಆಡಳಿತ ನಿರ್ದೇಶಕ ಡಾ.ಟಿ.ಎಂ.ಅಬ್ದುಲ್ ರವೂಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News