ಕೊಣಾಜೆ : ಬಿ.ಮುಹಮ್ಮದ್ ನಿಧನ
Update: 2021-01-13 04:35 GMT
ಕೊಣಾಜೆ : ಬೆಳ್ಮ ದೋಟ ಜುಮಾ ಮಸೀದಿಯಲ್ಲಿ ಇಪ್ಪತ್ತು ವರ್ಷಗಳಿಂದ ಅಧ್ಯಕ್ಷರಾಗಿದ್ದ ಬಿ. ಮುಹಮ್ಮದ್ (65) ಅವರು ಅಲ್ಪಕಾಲದ ಅನಾರೋಗ್ಯದಿಂದ ದೇರಳಕಟ್ಟೆ ಅಸ್ಪತ್ರೆಯಲ್ಲಿ ರಾತ್ರಿ ನಿಧನರಾಗಿರುತ್ತಾರೆ.
ಮೃತರು ಪತ್ನಿ, ಮಂಗಳೂರು ಯೂತ್ ಕಾಂಗ್ರೆಸ್ ಅಧ್ಯಕ್ಷ ರವೂಫ್ ಸಿ.ಎಂ ಹಾಗೂ ಬೆಳ್ಮ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಸತ್ತಾರ್ ಸಿ.ಎಂ. ಸಹಿತ ಐವರು ಪುತ್ರರು, ಓರ್ವ ಪುತ್ರಿ ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಇಂದು ಮಧ್ಯಾಹ್ನ 12ರ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.