ಉಡುಪಿ ಮುಸ್ಲಿಂ ವೆಲ್ಫೇರ್ ‌ಅಸೋಸಿಯೇಶನ್ ಅಧ್ಯಕ್ಷರಾಗಿ ಅಬ್ದುಲ್ ಗಫೂರ್

Update: 2021-01-13 08:39 GMT
ಅಬ್ದುಲ್ ಗಫೂರ್

‌ಉಡುಪಿ, ಜ.13: ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ರಾಗಿ ಕಲ್ಯಾಣಪುರ ಅಬ್ದುಲ್ ಗಫೂರ್ ಆಯ್ಕೆಯಾಗಿದ್ದಾರೆ.

ಜ.3ರಂದು ಸಂಸ್ಥೆಯ ಕಚೇರಿಯಲ್ಲಿ ಸಂಸ್ಥೆಯ ಆಧ್ಯಕ್ಷ ವಿ.ಎಸ್.ಉಮರ್ ಅಧ್ಯಕ್ಷತೆಯಲ್ಲಿ ಜರಗಿದ ವಾರ್ಷಿಕ ಮಹಾ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ನಿಕಟಪೂರ್ವ ಕಾರ್ಯದರ್ಶಿ ಖಲೀಲ್ ಅಹ್ಮದ್ ವಾರ್ಷಿಕ ವರದಿ, ಖಜಾಂಚಿ ಮುನೀರ್ ಲೆಕ್ಕಪತ್ರ ಮಂಡಿಸಿದರು. ಮುಂದಿನ ವರ್ಷಕ್ಕೆ ನೂತನ ಸಮಿತಿಯನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಕೆ.ಅಬ್ದುಲ್ ಗಫೂರ್ ಆದಿ ಉಡುಪಿ, ಕಾರ್ಯದರ್ಶಿಯಾಗಿ ಯು.ಇಬ್ರಾಹಿಮ್ ಕಾರ್ಯದರ್ಶಿ, ಜತೆ ಕಾರ್ಯದರ್ಶಿ ಯಾಗಿ ಮುಹಮ್ಮದ್ ಫಯಾಝ್ ಹಾಗು ಖಜಾಂಚಿಯಾಗಿ ಝಕೀರ್ ಹುಸೈನ್, ಸದಸ್ಯರುಗಳಾಗಿ ವಿ.ಎಸ್.ಉಮರ್, ಮುನೀರ್ ಮಹಮೂದ್, ಖಾಲಿದ್ ಅಬ್ದುಲ್ ಅಝೀಝ್, ಎಸ್.ಎ. ಶಮೀಮ್, ರಿಯಾಝ್ ಅಹ್ಮದ್, ಇಕ್ವಾನ್ ಜಿ.ರವೂಫ್ ಆಯ್ಕೆಯಾದರು.

ಇವರೊಂದಿಗೆ ಇಕ್ಬಾಲ್ ಮನ್ನಾ ಮತ್ತು ಪರ್ವೇಝ್ ಯಕೂಬ್ ಅವರನ್ನು ಹೆಚ್ಚುವರಿ ಸಸ್ಯರನ್ನಾಗಿ ಸೇರಿಸಿಕೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News