ಜ.15ರಂದು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದಲ್ಲಿ ಫೋನ್ ಇನ್ ಕಾರ್ಯಕ್ರಮ

Update: 2021-01-13 12:02 GMT

ಉಡುಪಿ, ಜ.13: ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಫೋನ್ ಇನ್ ಕಾರ್ಯಕ್ರಮವನ್ನು ಜ.15ರಂದು ಸಂಜೆ 5ಗಂಟೆಯಿಂದ ಏಳು ಗಂಟೆ ಯವರೆಗೆ ಹಮ್ಮಿಕೊಳ್ಳಲಾಗಿದೆ.

ನಗರದ ಬೋರ್ಡ್ ಹೈಸ್ಕೂಲ್‌ನಲ್ಲಿ ನಡೆಯುವ ಫೋನ್ ಇನ್ ಕಾರ್ಯ ಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಭಾಗವಹಿಸಲಿರುವರು. ಇವರು ಮಕ್ಕಳ ಕರೆಗಳನ್ನು ಸ್ವೀಕರಿಸಿ ಉತ್ತಮ ಕಲಿಕೆಗೆ ಸಲಹೆಗಳನ್ನು ನೀಡಲಿ ದ್ದಾರೆ. ಕಾರ್ಯಕ್ರಮ ಸಂಯೋಜಕ ಇಲಾಖೆ ಉಪನಿರ್ದೇಶಕ ಎನ್.ಎಚ್. ನಾಗೂರ, ಉಡುಪಿ ಬಿಇಓ ಮಂಜುಳಾ ಉಪಸ್ಥಿತರಿರುವರು.

ದೂರವಾಣಿ ಸಂಖ್ಯೆಗಳು: ಎಸ್‌ಎಸ್‌ಎಲ್‌ಸಿ ವಿಜ್ಞಾನ ವಿಷಯ ಸಮಸ್ಯೆಗಳಿಗೆ ದೀಪಾ ಹೆಜಮಾಡಿ- 8618240682, ರಜನಿ ಉಡುಪ- 9880784064, ವಿನೋದ-9743577651, ನವ್ಯಾ- 9008417909, ನಾಗೇಂದ್ರ ಪೈ- 9886118891, ಮಿಲ್ಟನ ಕ್ರಸ್ಟಾ- 9481144081, ನಯನಾ- 9481 842173ಕ್ಕೆ ಕರೆ ಮಾಡಬಹುದಾಗಿದೆ.

ಪರೀಕ್ಷಾ ಸಿದ್ಧತೆ ಮತ್ತಿತ್ತರ ಪ್ರಶ್ನೆಗಳಿದ್ದರೆ ಉಪನಿರ್ದೇಶಕರು- 9448999353 ಮತ್ತು ಬಿಇಓ-9480695376ಕ್ಕೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News