ಎಸ್‌ಡಿಪಿಐ ಉಡುಪಿ ಜಿಲ್ಲೆಯ ಗ್ರಾಪಂ ವಿಜೇತಾ ಅಭ್ಯರ್ಥಿಗಳಿಗೆ ಅಭಿನಂದನೆ

Update: 2021-01-13 15:31 GMT

ಉಡುಪಿ, ಜ.13: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ವತಿಯಿಂದ ಗ್ರಾಪಂ ಚುನಾವಣೆಯಲ್ಲಿ ವಿಜೇತ ರಾದ 17 ಮಂದಿ ಎಸ್‌ಡಿಪಿಐ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ಇಂದು ಉಡುಪಿ ಹೊಟೇಲ್ ದುರ್ಗಾ ಇಂಟರ್‌ನ್ಯಾಶನಲ್‌ನಲ್ಲಿ ಜರಗಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗೀಯ ಸಂಚಾಲಕ ಶೇಖರ್ ಹೆಜಮಾಡಿ ಮಾತನಾಡಿ, ದೇಶದ ಎಲ್ಲ ಪ್ರಮುಖ ಕ್ಷೇತ್ರ, ಇಲಾಖೆ ಹಾಗೂ ಪ್ರಮುಖ ಸ್ಥಾನಗಳಲ್ಲಿ ಮನುವಾದಿಗಳೇ ತುಂಬಿಹೋಗಿ ದ್ದಾರೆ. ಇದರಿಂದ ದೇಶದ ಬಹು ಸಂಖ್ಯಾತ ಜನರಿಗೆ ಸಾಮಾಜಿಕ ನ್ಯಾಯ ಮರೀಚಿಕೆ ಆಗುತ್ತಿದೆ ಎಂದು ಆರೋಪಿಸಿದರು.

ಒಗ್ಗಟ್ಟಿನ ಕೊರತೆಯಿಂದ ಶೇ.97ರಷ್ಟಿರುವ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ್ಗದವರಿಗೆ ಶೇ.3ರಷ್ಟಿರುವ ಮನುವಾ ದಿಗಳ ಕೈಯಿಂದ ಅಧಿಕಾರವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದ ಅವರು, ದೇಶದ ಜಾತ್ಯ ತೀತ ಶಕ್ತಿಗಳು ಅಂಬೇಡ್ಕರ್ ಚಿಂತನೆಯಡಿ ಒಂದಾಗಿ ಮುಂದಿನ ವಾರೀಸು ದಾರರಾಗಬೇಕು. ಆ ಮೂಲಕ ರಾಜಕೀಯ ಚಿತ್ರಣವನ್ನು ಬದಲಾಯಿಸಿ, ದೇಶವನ್ನು ಕಟ್ಟಬೇಕು ಎಂದರು.

ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸೊ ಫ್ರಾಂಕೋ ಮಾತನಾಡಿ, ಎಸ್‌ಡಿ ಪಿಐ ಎಂದಿಗೂ ಹಿಂದು ವಿರೋಧಿ ಅಲ್ಲ. ಕಾಂಗ್ರೆಸ್ ಮೃದು ಹಿಂದ್ವುತ, ಬಿಜೆಪಿ ಕಠಿಣ ಹಿಂದುತ್ವ ಹೊಂದಿದ್ದರೆ ಎಸ್‌ಡಿಪಿಐ ಮನುಷ್ಯತ್ವವನ್ನು ಹೊಂದಿದೆ. ಆಯ್ಕೆ ಯಾದ ಗ್ರಾಪಂ ಸದಸ್ಯರು ಪ್ರಾಮಾಣಿಕತೆಯಿಂದ ಜನ ಸೇವೆ ಮಾಡಬೇಕು ಎಂದು ಹೇಳಿದರು.

ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ದಿಕ್ಸೂಚಿ ಭಾಷಣ ಮಾಡಿದರು. ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚರ್, ಜಮೀಯ್ಯ ತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಶಭೀ ಅಹ್ಮದ್ ಕಾಝಿ, ರಾಷ್ಟ್ರೀಯ ಮುಸ್ಲಿಮ್ ಮೋರ್ಚಾ ರಾಜ್ಯಾಧ್ಯಕ್ಷ ತೌಫೀಕ್ ವೌಲಾನ, ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಹಂಝತ್ ಹೆಜಮಾಡಿ ಮಾತನಾಡಿದರು.

ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಪಿ.ಇಬ್ರಾಹಿಂ, ಪಿಎಫ್‌ಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಬಾಮ್ಸೆಫ್‌ನ ನಝೀರ್ ಬೆಳ್ವಾಯಿ, ಎನ್‌ಎನ್‌ಓ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ, ಮಲ್ಪೆ ಜಾಮೀಯ ಮಸೀದಿ ಅಧ್ಯಕ್ಷ ಖತೀಬ್ ರಶೀದ್, ಉದ್ಯಮಿ ರಫೀಕ್ ಬಿಎಸ್‌ಎಫ್, ಕೊಡವೂರು ಜಾಮೀಯ ಮಸೀದಿಯ ಇಮಾಮ್ ಮೌಲಾನ ಜಾವೇದ್ ಕಾಸಿಮಿ, ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಜೀದ್ ಹಸನ್ ಉಚ್ಚಿಲ, ಎನ್‌ಡಬ್ಲೂಎಫ್ ವಲಯ ಅಧ್ಯಕ್ಷೆ ನಸೀಮ ಝರಾಯಿ, ವಲಯ ಕಾರ್ಯದರ್ಶಿ ನಾಝಿಯಾ ಬದ್ರುದ್ದೀನ್ ಉಪಸ್ಥಿತರಿದ್ದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಇಲ್ಯಾಸ್ ಸಾಸ್ತಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನೀಫ್ ಮುಳೂರು ಸ್ವಾಗತಿಸಿದರು. ಮುಹಮ್ಮದ್ ಶಫೀಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News