ಬೆಳ್ತಂಗಡಿ : ಬಸ್ ಢಿಕ್ಕಿ; ರಿಕ್ಷಾ ಚಾಲಕ ಮೃತ್ಯು

Update: 2021-01-14 18:13 GMT

ಬೆಳ್ತಂಗಡಿ : ಅಳದಂಗಡಿ ಸಮೀಪದ ಪಿಲ್ಯ ಎಂಬಲ್ಲಿ ಬಸ್ ಮತ್ತು ರಿಕ್ಷಾದ ನಡುವೆ ಢಿಕ್ಕಿ ಸಂಭವಿಸಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ರಿಕ್ಷಾ ಚಾಲಕನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News