ಕೆಎಂಎಫ್ ನಿಯೋಗ ಪಶುಸಂಗೋಪನಾ ಸಚಿವರ ಭೇಟಿ
Update: 2021-01-19 17:02 GMT
ಮಂಗಳೂರು, ಜ.19: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ ಹೆಗಡೆ ನೇತೃತ್ವದ ನಿಯೋಗವು ಮಂಗಳವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚೌಹಾನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ರಾಜ್ಯದ ಎಲ್ಲಾ ಸಹಕಾರಿ ಸಂಸ್ಥೆಗಳ ವಾರ್ಷಿಕ ಲಾಭಾಂಶದಲ್ಲಿ ಕನಿಷ್ಟ ಶೇ.2ರಷ್ಟು ಹಣವನ್ನು ಗೋಶಾಲೆಗಳ ನಿರ್ವಹಣೆ ಮತ್ತು ದೇಶೀಯ ತಳಿಗಳ ಅಭಿವೃದ್ಧಿ, ಗೋ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಮೀಸಲಿಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಸುರೇಶ್, ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್, ಸುಧಾಕರ ರೈ, ವ್ಯವಸ್ಥಾಪಕ ಡಾ. ನಿತ್ಯಾನಂದ ಭಕ್ತ, ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.