ಮಂಗಳೂರು ವಿಮಾನ ನಿಲ್ದಾಣಕ್ಕೆ ಸುರಕ್ಷಿತ ಮಾನ್ಯತೆ

Update: 2021-01-19 17:07 GMT

ಮಂಗಳೂರು, ಜ.19: ವಿಮಾನ ನಿಲ್ದಾಣಗಳ ಪ್ರಯಾಣಿಕರ ತಪಾಸಣೆ ನಡೆಸುವ 118 ತಾಣಗಳ ಪರಿಶೀಲನೆ ನಡೆಸಿದ ನಂತರ ಮಂಗಳೂರು, ಅಹ್ಮದಾಬಾದ್ ಮತ್ತು ಲಖನೌ ಅದಾನಿ ವಿಮಾನ ನಿಲ್ದಾಣಗಳು ಅಂತಾರಾಷ್ಟ್ರೀಯ ಮಂಡಳಿಯ ಸುರಕ್ಷಿತ ಪ್ರಯಾಣದ ಎಸಿಐ ವಿಮಾನ ನಿಲ್ದಾಣ ಆರೋಗ್ಯ ಮಾನ್ಯತೆ ಪಡೆದಿವೆ.

ವಾಯುಯಾನ ಸೇವೆಯ ಪುನರಾರಂಭ ಮತ್ತು ಪುಶ್ಚೇತನ ಮಾರ್ಗದರ್ಶಿ ಸೂತ್ರಗಳು, ಅಂತಾರಾಷ್ಟ್ರೀಯ ನಾಗರಿಕ ವಿಮಾನ ಯಾನ ಸಂಘಟನೆಯ ಮತ್ತು ವಿಮಾನ ಯಾನ ಪುನಾರಂಭ ಕಾಯ್ದೆಯ ಶಿಫಾರಸುಗಳು ಮತ್ತು ಉದ್ದಿಮೆಯ ಅತ್ಯುತ್ತಮ ಅಭ್ಯಾಸಗಳಿಗೆ ಅನುಗುಣವಾಗಿ ಈ ವಿಮಾನ ನಿಲ್ದಾಣಗಳು ಎಲ್ಲ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣ ಅನುಭವ ಒದಗಿಸಿವೆ ಎಂದು ಅದಾನಿ ಏರ್‌ಪೋರ್ಟ್ಸ್‌ನ ಸಿಇಒ ಬೆಹ್ನಾದ್ ಝಾಂಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News