ಕಾಜೂರು ದರ್ಗಾ ಶರೀಫ್: ಮಹಿಳಾ ಶರೀಅತ್ - ದ‌ಅವಾ ಕಾಲೇಜಿನ‌ ನೂತನ ಕಟ್ಟಡ ಉದ್ಘಾಟನೆ

Update: 2021-01-20 06:56 GMT

ಬೆಳ್ತಂಗಡಿ, ಜ.20:  ಕಾಜೂರು ದರ್ಗಾ ಶರೀಫ್ ವಠಾರದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ‌ ಉಸ್ತಾದ್ ನೇತೃತ್ವದಲ್ಲಿ ಮರ್ಕಝ್ ಆರ್‌ಸಿಎಫ್‌ಐ ಆರ್ಥಿಕ ನೆರವಿನಿಂದ ನೂತನವಾಗಿ ನಿರ್ಮಿತ ಮಹಿಳಾ ಶರೀಅತ್ ಮತ್ತು ದ‌ಅವಾ ಕಾಲೇಜು‌  ಕಟ್ಟಡ ಉದ್ಘಾಟನೆಗೊಂಡಿತು.

ತಾ. ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸೈಯದ್ ಸಾದಾತ್ ತಂಙಳ್, ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಸೈಯದ್ ಕಾಜೂರು ತಂಙಳ್ ಉದ್ಘಾಟನೆ ನೆರವೇರಿಸಿದರು.

ಕಾಜೂರು ಮುದರ್ರಿಸ್ ಕೆ.ಎಚ್.ಸಿರಾಜುದ್ದೀನ್ ಝುಹ್ರಿ, ಆರ್‌ಸಿಎಫ್‌ಐ ನ ತಸ್ಲೀಂ ಸಖಾಫಿ ಮತ್ತು ಮುನ್ನಾಸ್ ಇಂಜಿನಿಯರ್ , ಹಾಜಿ ಬಿ.ಎಂ.ಅಬ್ದುಲ್ ಹಮೀದ್ ಉಜಿರೆ, ಬಿ.ಎ.ನಝೀರ್ ಬೆಳ್ತಂಗಡಿ, ಎ.ಯೂಸುಫ್ ಹಾಜಿ ಉಪ್ಪಳ್ಳಿ, ಹಾಜಿ ಅಬ್ದುಲ್‌ ರಹಿಮಾನ್ ಅರಿಯಡ್ಕ ಪುತ್ತೂರು, ನೂರುದ್ದೀನ್ ಸಾಲ್ಮರ, ಎಂ.ಬಿ.ನಝೀರ್ ಮಠ, ಕೆ.ಮುಹಮ್ಮದ್ ಕಿಲ್ಲೂರು, ಫೈಝಲ್ ಸಲೀಂ ಬೆಂಗಳೂರು, ಅಶ್ರಫ್ ಆಲಿಕುಂಞಿ ಮುಂಡಾಜೆ, ಅಬ್ದುಲ್ ಕರೀಂ ಗೇರುಕಟ್ಟೆ, ಕೆರೀಂ ಕೆ.ಎಸ್.ಮುಂಡಾಜೆ, ಹಾಜಿ ಅಬ್ದುರ್ರಝಾಕ್ ಸೋಮಂತಡ್ಕ, ಶಂಸುದ್ದೀನ್ ಪಾಣೆ‌ಮಂಗಳೂರು, ರಶೀದ್ ಬಲಿಪಾಯ, ಯಾಕೂಬ್ ಕನ್ಯಾಡಿ, ಎಂ.ಎಚ್.ನಾಸಿರ್‌ ಮಾಸ್ಟರ್, ಅಬ್ದುಲ್ ಶುಕೂರ್‌ ಉಜಿರೆ, ಮುಹಮ್ಮದ್ ಮುಜೀಬ್ ನಿಡಿಗಲ್, ಅಬ್ದುಲ್ ಮುತ್ತಲಿಬ್  ಇಂದಬೆಟ್ಟು, ಅಬ್ದುಲ್ ಹಮೀದ್ ಕೇಳ್ತಾಜೆ, ಗ್ರಾಪಂ ಸದಸ್ಯರಾದ ಕೆ.ಯು.ಮುಹಮ್ಮದ್, ಶಾಹುಲ್ ಹಮೀದ್ ಮತ್ತು ಅಹ್ಮದ್ ಕಬೀರ್, ಕಾಜೂರು ಮಾಜಿ ಅಧ್ಯಕ್ಷರುಗಳಾದ ಕೆ.ಶೇಕಬ್ಬ, ಬಿ.ಎ.ಯೂಸುಫ್ ಶರೀಫ್,‌ ಕೆ.ಯು.ಉಮರ್ ಸಖಾಫಿ, ಇಬ್ರಾಹೀಂ ಮುಸ್ಲಿಯಾರ್ ಮತ್ತು ಮುಹಮ್ಮದ್ ಪಿ.ಎ., ಸಮಿತಿಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದರ್ಶಿ ಜೆ.ಎಚ್.ಅಬೂಬಕರ್ ಸಿದ್ದೀಕ್, ಕೋಶಾಧಿಕಾರಿ ಕೆ.ಎಂ.ಕಮಾಲ್, ಕಚೇರಿ ವ್ಯವಸ್ಥಾಪಕ‌ ಶಮೀಮ್ ಮೊದಲಾದವರು ಉಪಸ್ಥಿತರಿದ್ದರು.

ಕಾಜೂರು ಸಮಿತಿಯ ಅಧ್ಯಕ್ಷ ಕೆ.ಯು.ಇಬ್ರಾಹೀಂ ಸ್ವಾಗತಿಸಿದರು‌.

ನವಾಝ್ ನೆಲ್ಲಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು. ಡಿ.ಕೆ.ರಶೀದ್ ಮದನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News