ನನ್ನ ಪ್ರವಾದಿ ಅಭಿಯಾನ : ರಾಜ್ಯ ಮಟ್ಟದಲ್ಲಿ ಗಾಯನ ಸ್ಪರ್ಧೆಯಲ್ಲಿ ಮುಹಮ್ಮದ್ ಪರ್ವೀಝ್ ದ್ವಿತೀಯ
Update: 2021-01-20 17:11 GMT
ಮಂಗಳೂರು : ಜೂನಿಯರ್ ಫ್ರೆಂಡ್ಸ್ ಕರ್ನಾಟಕ ಹಾಗು ಚಿಗುರು ಕಲಾ ವೇದಿಕೆ ಇದರ ವತಿಯಿಂದ ರಾಜ್ಯ ಮಟ್ಟದಲ್ಲಿ ನೆಡೆದ 'ನನ್ನ ಪ್ರವಾದಿ ಅಭಿಯಾನ' ಅಂಗವಾಗಿ ನಡೆದ ರಾಜ್ಯ ಮಟ್ಟದಲ್ಲಿ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಬಂಟ್ವಾಳ ತಾಲೂಕಿನ ಲೊರೆಟ್ಟೋ ಪದವಿನ ಇರ್ಷಾದುಸ್ಸಿಭಿಯಾನ್ ಮದ್ರಸದ ವಿದ್ಯಾರ್ಥಿ ಮುಹಮ್ಮದ್ ಪರ್ವೀಝ್ ಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಮದ್ರಸ ಹಾಲ್ ನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬಂಟ್ವಾಳ ಪುರಸಭೆ ಸದಸ್ಯರಾದ ಮುನಿಶ್ ಅಲಿ ಬಂಟ್ವಾಳ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ ಸ್ಥಳೀಯ ಖತೀಬ್ ಶರೀಫ್ ಅರ್ಷದಿ, ಮಾಜಿ ಖತೀಬ್ ಕೆ ಎಂ ಅಬ್ದುಲ್ಲಾ ಮುಸ್ಲಿಯಾರ್, ಸದರ್ ಉಸ್ತಾದ್ ಸಿರಾಜುದ್ದೀನ್ ಮುಸ್ಲಿಯಾರ್, ಉಮರ್ ಮುಸ್ಲಿಯಾರ್ ಹಾಗು ಇತರರು ಉಪಸ್ಥಿತರಿದ್ದರು.