ಗುರುವಾಯನಕೆರೆ ಕೇಂದ್ರ ಜುಮಾ ಮಸ್ಜಿದ್ ಗಲ್ಫ್ ಕಮಿಟಿ ಅಧ್ಯಕ್ಷರಾಗಿ ಸಲೀಮ್ ಜಿ.ಕೆ. ಆಯ್ಕೆ

Update: 2021-06-29 07:16 GMT
ಸಲೀಮ್ ಜಿ.ಕೆ. (ಎಡಚಿತ್ರ), ಅಬ್ಬಾಸ್ ಬಳಂಜ 

ಬೆಳ್ತಂಗಡಿ, ಜೂ.29: ಗುರುವಾಯನಕೆರೆಯ ಹಝ್ರತ್ ಹಯಾತುಲ್ ಔಲಿಯಾ ಜುಮಾ ಮಸೀದಿ ಜಮಾಅತ್ ನ ಅಧೀನದಲ್ಲಿ ಬರುವ ಅಲಾದಿ, ಜಿ.ಕೆರೆ, ಕೋಂಟುಪಲ್ಕೆ, ಮೇಲಂತಬೆಟ್ಟು ಹಾಗೂ ಬಳಂಜ ವ್ಯಾಪ್ತಿಯ ಗಲ್ಫ್ ನಿವಾಸಿಗಳ ಸಂಘಟನೆ ಗಲ್ಫ್ ಕಮಿಟಿ ಗುರುವಾಯನಕೆರೆಯನ್ನು ಇತ್ತೀಚೆಗೆ ರಚಿಸಲಾಯಿತು.

ಸೌದಿ ಅರೇಬಿಯಾ,ಯುಎಇ, ಖತಾರ್, ಕುವೈತ್ ‌ಸೇರಿದಂತೆ ವಿವಿಧ ಗಲ್ಫ್ ರಾಷ್ಟ್ರಗಳಲ್ಲಿರುವ 35 ಸದಸ್ಯರ ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ನೂತನ ಅಧ್ಯಕ್ಷರಾಗಿ ಸಲೀಮ್ ಜಿ.ಕೆ. ಗುರುವಾಯನಕೆರೆ (ಜಿಝಾನ್, ಕೆಎಸ್ ಎ.) , ಉಪಾಧ್ಯಕ್ಷರಾಗಿ ಅನ್ವರ್ ಮೇಲಂತಬೆಟ್ಟು(ದಮ್ಮಾಮ್ ಕೆಎಸ್ ಎ.),  ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎ.ಅಬ್ಬಾಸ್ ಬಳಂಜ(ಕುವೈತ್) , ಜತೆ ಕಾರ್ಯದರ್ಶಿಯಾಗಿ ಅಬ್ಬಾಸ್ ಹೊಟೇಲ್ ಜಿ.ಕೆರೆ(ಅಲ್ ರಾಸ್ ಕೆಎಸ್ ಎ.) ಆಯ್ಕೆಯಾದರು.

ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಜಮಾಅತ್ ಕಮಿಟಿ ಅಧ್ಯಕ್ಷ ಲತೀಫ್ ಹಾಜಿ ಎಸ್.ಎಂ.ಎಸ್., ಹಾಗೂ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಶಾಫಿ ನಿರ್ವಹಿಸಿದರು.

 ಜಮಾಅತ್ ಖತೀಬ್ ಹಾಗೂ ಬೆಳ್ತಂಗಡಿ ತಾಲೂಕು ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಅಸ್ಸೈಯದ್ ಅಬ್ದರ್ರರಹ್ಮಾನ್ ಸಾದಾತ್ ತಂಙಳ್ ದುಆಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News