ಜು.1: 'ಸಹಾಯ್' ದಿನಸಿ ಕಿಟ್ ವಿತರಣೆಗೆ ಚಾಲನೆ

Update: 2021-06-30 09:53 GMT

ಮಂಗಳೂರು, ಜೂ.30: ಕರ್ನಾಟಕ ಮುಸ್ಲಿಂ ಜಮಾಅತ್ ವತಿಯಿಂದ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಪ್ರಾಯೋಜಕತ್ವದಲ್ಲಿ ರಾಜ್ಯಾದ್ಯಂತ  'ಸಹಾಯ್' ದಿನಸಿ ಕಿಟ್ ವಿತರಣೆಯು ನಡೆಯಲಿದ್ದು, ಜುಲೈ 1ರಂದು ಅಪರಾಹ್ನ 2 ಗಂಟೆಗೆ ಮಂಗಳೂರಿನಲ್ಲಿ ಚಾಲನೆ ದೊರಕಲಿದೆ.
ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಪ್ರಾರ್ಥನೆಗೆ ನೇತೃತ್ವ ನೀಡುವರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆ ವಹಿಸಲಿದ್ದು, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ.ಹಾಜಿ ಶೇಕ್ ಬಾವಾ ಅಬುಧಾಬಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಹಾಯ್ ರಾಜ್ಯ ಪ್ಲಾನಿಂಗ್ ಸೆಲ್ ಚೇರ್ಮೇನ್ ಅಬ್ದುಲ್ ಹಮೀದ್ ಬಜ್ಪೆ ಮುನ್ನುಡಿ ಮಾತುಗಳನ್ನಾಡುವರು.

ಅತಿಥಿಗಳಾಗಿ ಎಸ್.ಎಂ.ಎ. ಅಧ್ಯಕ್ಷ ಸೈಯದ್ ಜಲಾಲುದ್ದೀನ್ ಅಲ್-ಹಾದಿ ತಂಙಳ್ ಮಲ್ಜ‌ಅ್, ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಮ್ತಾಝ್ ಅಲಿ ಕೃಷ್ಣಾಪುರ, ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಪಿ.ಎ.ಉಸ್ಮಾನ್ ಸ‌ಅದಿ ಪಟ್ಟೋರಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸ‌ಅದಿ ಶಿವಮೊಗ್ಗ, ಎಸ್.ಇ.ಡಿ.ಸಿ. ಅಧ್ಯಕ್ಷ ಕೆಕೆಎಂ ಕಾಮಿಲ್ ಸಖಾಫಿ, ಎಸ್.ಜೆ.ಎಂ. ರಾಜ್ಯಾಧ್ಯಕ್ಷ ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಮುಸ್ಲಿಂ ಜಮಾಅತ್ ಮಂಗಳೂರು ತಾಲೂಕು ಅಧ್ಯಕ್ಷ ಬಿ.ಎ. ಅಬ್ದುನ್ನಾಸಿರ್ ಲಕ್ಕಿಸ್ಟಾರ್, ಕೆಸಿಎಫ್ ಸೌದಿ ಅರೇಬಿಯ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್, ಸಹಾಯ್ ರಾಜ್ಯ ಪ್ಲಾನಿಂಗ್ ಸೆಲ್ ಕನ್ವೀನರ್ ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಸಹಾಯ್ ರಾಜ್ಯ ಕೋ ಆರ್ಡಿನೇಟರ್ ಅಶ್ರಫ್ ಕಿನಾರ ಮಂಗಳೂರು, ಸಹಾಯ್ ದ.ಕ. ಜಿಲ್ಲಾ ಕೋಡಿನೇಟರ್ ಸಿರಾಜುದ್ದೀನ್ ಇನ್ನಿತರ ನಾಯಕರು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News