ದ.ಕ. ಜಿಲ್ಲೆ : 25,326 ಮಂದಿಗೆ ಕೋವಿಡ್ ಲಸಿಕೆ

Update: 2021-07-03 16:23 GMT

ಮಂಗಳೂರು, ಜು.3: ದ.ಕ.ಜಿಲ್ಲೆಯಲ್ಲಿ ಶನಿವಾರ 25,326 ಮಂದಿ ಕೋವಿಡ್ ಪ್ರತಿರೊಧ ಲಸಿಕೆ ಪಡೆದಿದ್ದಾರೆ. ಅದರಲ್ಲಿ ಬಂಟ್ವಾಳ ತಾಲೂಕಿನ 6,614, ಬೆಳ್ತಂಗಡಿಯ 1,359, ಮಂಗಳೂರಿನ 15,393, ಪುತ್ತೂರಿನ 356, ಸುಳ್ಯದ 1,604 ಮಂದಿ ಸೇರಿದ್ದಾರೆ.

ಶನಿವಾರ ದ.ಕ.ಜಿಲ್ಲೆಯ 12 ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಸಹಿತ 2,226 ಮಂದಿ ಲಸಿಕೆ ಪಡೆದಿದ್ದಾರೆ. ಅದರಲ್ಲಿ ಬಂಟ್ವಾಳ ತಾಲೂಕಿನ 2 ಕಾಲೇಜಿನ 761 ವಿದ್ಯಾರ್ಥಿಗಳು, 91 ಬೋಧಕರು, 21 ಬೋಧಕೇತರರ ಸಹಿತ 873, ಬೆಳ್ತಂಗಡಿ ತಾಲೂಕಿನ 1 ಕಾಲೇಜಿನ 157 ವಿದ್ಯಾರ್ಥಿಗಳು, 8 ಬೋಧಕರ ಸಹಿತ 165, ಮಂಗಳೂರು ತಾಲೂಕಿನ 3 ಕಾಲೇಜಿನ 67 ವಿದ್ಯಾರ್ಥಿಗಳು, 418 ಬೋಧಕರು, 519 ಬೋಧಕೇತರರ ಸಹಿತ 1,004, ಸುಳ್ಯ ತಾಲೂಕಿನ 6 ಕಾಲೇಜಿನ 184 ವಿದ್ಯಾರ್ಥಿಗಳು ಲಸಿಕೆ ಪಡೆದಿದ್ದಾರೆ.

ಒಟ್ಟಾರೆ ಶನಿವಾರ 1,169 ವಿದ್ಯಾರ್ಥಿಗಳು,517 ಬೋಧಕರು, 540 ಬೋಧಕೇತರ ಸಿಬ್ಬಂದಿ ವರ್ಗ ಲಸಿಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News