ಮಂಗಳೂರಿನಿಂದ ನಾಟೆಕಲ್ -ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಕಲ್ಪಿಸುವಂತೆ ಮನವಿ

Update: 2021-07-03 17:34 GMT

ಮಂಗಳೂರು: ನಾಟೆಕಲ್ -ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಒದಗಿಸುವಂತೆ ಕಳೆದ 10ವರ್ಷಗಳಿಂದ ಈ ಭಾಗದ ಜನರು ಒತ್ತಾಯಿಸುತ್ತ ಬಂದಿದ್ದಾರೆ. ಈ ಬಗ್ಗೆ ಹಲವು ಬಾರಿ ಇಲ್ಲಿನ ಸಂಘ ಸಂಸ್ಥೆಗಳು ಸಂಬಂಧಪಟ್ಟವರಿಗೆ ಮನವಿಯನ್ನೂ ಸಲ್ಲಿಸಿವೆ. ಆದರೆ ಇದುವರೆಗೂ ಈ ಬಗೆಗೆನ ಬೇಡಿಕೆ ಈಡೇರಿಲ್ಲ. ಸದ್ಯ ಈ ಭಾಗದಲ್ಲಿ ಕೇವಲ ಖಾಸಾಗಿ ಬಸ್ಸುಗಳು ಮಾತ್ರ ಸಂಚರಿಸುತ್ತಿದ್ದು ಅವುಗಳು ಸದಾ ತುಂಬಿ ತುಳುಕುತ್ತಿರುತ್ತದೆ. ಇದರಿಂದಾಗಿ ಈ ಭಾಗದ ವಿದ್ಯಾರ್ಥಿಗಳು ಮತ್ತು ವಯಸ್ಕರಿಗೆ ಬಸ್ಸಿನಲ್ಲಿ ಸಂಚರಿಸಲು ಹರಸಾಹಸ ಪಡಬೇಕಿದೆ. ಆದರಿಂದ ತಾವುಗಳು ನಮ್ಮ ಈ ಮನವಿಗೆ ಸ್ಪಂದಿಸಿ ಈ ಮಾರ್ಗದಲ್ಲಿ ಸರ್ಕಾರಿ ಬಸ್ ಸಂಚರಿಸಲು ಅವಕಾಶ ಮಾಡಿಕೊಡಬೇಕಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಮಾಡಲಾಯಿತು.

ಮನವಿ ನೀಡುವ ನಿಯೋಗದಲ್ಲಿ ನಾಗರೀಕ ಹೋರಾಟ ಸಮಿತಿ ಮೊಂಟೆಪದವು ಇದರ ಸದಸ್ಯರಾದ ರಝಾಕ್ ಮೊಂಟೆಪದವು, ಅಝೀಝ್ ಮೊಂಟೆಪದವು, ರಿಯಾಝ್ ಸಾಮಾನಿಗೆ, ರಫೀಕ್ ವನದಡಿ, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಆಸಿಫ್ ಎಸ್ ಐ ಮತ್ತು ಶಾಕಿರ್ ಎಂಕೆ ಉಪಸ್ಥಿತರಿದ್ದರು.

ಮನವಿಯ ಪ್ರತಿಯನ್ನು ಮಂಗಳೂರು ವಿಧಾನಸಭಾ ಕ್ಷೆತ್ರದ ಶಾಸಕರಾದ ಯುಟಿ ಖಾದರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮತ್ತು ವಿಭಾಗೀಯ ವ್ಯವಸ್ಥಾಪಕರು, ಕೆಎಸ್ ಆರ್ ಟಿಸಿ ಮಂಗಳೂರು ಇವರಿಗೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News