ಜು.5ರಿಂದ ಮಾಲ್, ಈಜುಕೊಳ ತೆರೆಯಲು ಅವಕಾಶ : ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ

Update: 2021-07-04 14:12 GMT

ಮಂಗಳೂರು, ಜು.4: ರಾಜ್ಯದಲ್ಲಿ 3ನೇ ಹಂತದ ಅನ್‌ಲಾಕ್ ಘೋಷಣೆಯಾಗಿದ್ದು, ಜು.5ರಿಂದ ಜು.19ರವರೆಗೆ ದ.ಕ. ಜಿಲ್ಲೆಯಲ್ಲೂ ಹಲವು ಚಟುವಟಿಕೆಗಳಿಗೆ ಪೂರ್ಣ ವಿನಾಯಿತಿ ನೀಡಲಾಗಿದೆ. ವಾರಾಂತ್ಯ ಕರ್ಫ್ಯೂ ಅಂತ್ಯಗೊಂಡಿದೆ. ಆದರೆ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಮುಂದುವರಿಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಸರಕಾರಿ, ಖಾಸಗಿ ಬಸ್‌ಗಳಿಗೆ ಶೇ.100ರಷ್ಟು ಪ್ರಯಾಣ ಮಾಡಲು ಅವಕಾಶವಿದೆ. ದೇವಸ್ಥಾನ, ಮಸೀದಿ, ಚರ್ಚ್‌ಗಳು ಕೇವಲ ಪ್ರಾರ್ಥನೆ, ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ಯಾವುದೇ ಸೇವಾ ಚಟುವಟಿಕೆಗೆ ಅನುಮತಿ ಇರುವುದಿಲ್ಲ. ರಾಜ್ಯ ಸರಕಾರದ ಪರಿಷ್ಕೃತ ಮಾರ್ಗಸೂಚಿಯನ್ನು ಯಥಾವತ್ತಾಗಿ ಪಾಲಿಸುವುದಾಗಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News