ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಸದನದ ಒಳಗೆ, ಹೊರಗೆ ಮೀನುಗಾರರ ಧ್ವನಿಯಾಗಿ ಹೋರಾಡುತ್ತೇವೆ -ಡಿ.ಕೆ.ಶಿವಕುಮಾರ್

Update: 2021-07-05 12:29 GMT

ಮಂಗಳೂರು, ಜು. 5: ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಸದನದ ಒಳಗೆ ಮತ್ತು ಹೊರಗೆ ಮೀನುಗಾರರ ಧ್ವನಿಯಾಗಿ ಹೋರಾಡಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಅವರು ಇಂದು ದ.ಕ. ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೋಳೂರು ಸುಲ್ತಾನ್ ಬತ್ತೇರಿಯಲ್ಲಿ ಬೋಳೂರು ಮೀನುಗಾರರ ಮಹಾ ಸಭಾದ ಸಭಾಂಗಣದಲ್ಲಿ ಮೀನುಗಾರರ ಸಮಸ್ಯೆ ಗಳ ಬಗ್ಗೆ ಸಮಾಲೋಚನೆ ನಡೆಸಿ ಅವರ ಸಮಸ್ಯೆ ಗಳನ್ನು ಆಲಿಸಿದರು.

ಕೇರಳ, ಗೋವಾದಲ್ಲಿರುವಂತೆ ಕರ್ನಾಟಕದಲ್ಲೂ ಕರಾವಳಿಯ ತೀರದಲ್ಲಿ ಬದುಕುತ್ತಿರುವ ಮೀನುಗಾರರಿಗೆ ಅನ್ಯಾಯವಾಗ ಬಾರದು. ಆಂಧ್ರದಲ್ಲಿ ದೊರೆಯುವಂತೆ ಡೀಸೆಲ್ ಸಬ್ಸಿಡಿ ಕರ್ನಾಟಕದ ಮೀನುಗಾರರಿಗೆ ದೊರೆಯಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮೀನುಗಾರರ ಧ್ವನಿಯಾಗಲಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಮೀನುಗಾರರಿದ್ದರೂ ಕೇವಲ ಕೆಲವೇ ಮಂದಿಗೆ 3ಸಾವಿರ ರೂ ಪರಿಹಾರ ನೀಡುವ ತೀರ್ಮಾನದಿಂದ ಮೀನುಗಾರರ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಪಡಿಸಲು ಸರಕಾರದ ಗಮನ ಸೆಳೆಯುವುದಾಗಿ ಶಿವಕುಮಾರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಕಕ್ಷ ಹರೀಶ್ ಕುಮಾರ್, ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ರಮಾನಾಥ ರೈ, ಅಭಯ ಚಂದ್ರ ಜೈನ್ , ಮಾಜಿ ಶಾಸಕರಾದ ಜೆ.ಆರ್ .ಲೋಬೊ, ಶಕುಂತ ಳಾ ಶೆಟ್ಟಿ, ಐವನ್ ಡಿ ಸೋಜ, ಪಿ.ವಿ.ಮೋಹನ್, ಮಿಥುನ್ ರೈ, ವಿನಯರಾಜ್ ಮೊದಲಾದವರು ಉಪಸ್ಥಿತರಿದ್ದರು.

ಮೀನುಗಾರರ ಮುಖಂಡರಾದ ನಾರಾಯಣ ಬೋಳೂರು, ಯಶವಂತ ಮೆಂಡನ್, ಮೋಹನ್ ಬೆಂಗ್ರೆ, ಚೇತನ್ ಬೆಂಗ್ರೆ, ಗಂಗಾಧರ್, ಸುಭಾಸ್ ಕುಂದರ್, ಮೀನುಗಾರ ಮಹಿಳೆಯರು ತಮ್ಮ ಸಮಸ್ಯೆ ತಿಳಿಸಿದರು.

ಇದೇ ಸಂದರ್ಭ ದಲ್ಲಿ ಮಂಗಳೂರಿನ ಸುಲ್ತಾನ್ ಬತ್ತೇರಿಯಲ್ಲಿ ಬೊಳೂರು ಮೊಗವೀರರ ಮಹಾಸಭಾದ ಅಧ್ಯಕ್ಷ ರಾಜಶೇಖರ ಕರ್ಕೇರಾ, ಪ್ರಸಾದ್ ಕಾಂಚನ್ ಮೊದಲಾದವರು  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News