ಬಜ್ಪೆ: ಸಹಾಯ್ ಪಡಿತರ ಕಿಟ್ ವಿತರಣೆ

Update: 2021-07-05 17:18 GMT

ಬಜ್ಪೆ: ಕರ್ನಾಟಕ  ಮುಸ್ಲಿಂ ಜಮಾಅತ್ ಸಹಾಯ್ ಹಾಗೂ ಟೀಂ ಇಸಾಬಾ ತುರ್ತು ಸೇವಾ ತಂಡ ಮತ್ತು ಎಸ್ಸೆಸ್ಸೆಫ್ ವತಿಯಿಂದ ಕೊರೋನ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ಹಾಗೂ ಸಂಕಷ್ಟದಲ್ಲಿರುವ ಅರ್ಹ 115 ಕುಟುಂಬಗಳಿಗೆ ರೇಶನ್ ಕಿಟ್ ವಿತರಣೆ ಹಾಗೂ ಸರಕಾರಿ ವೈದ್ಯರಿಗೆ ಗೌರವಾರ್ಪಣೆ  ಕಾರ್ಯಕ್ರಮ ಅನ್ಸಾರ್ ಶಾಲೆಯ ಸಭಾಭವನ ಇಂದು ನಡೆಯಿತು.

ಅಬ್ದುಲ್ ರಹೀಮ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಅಹ್ಮದ್ ಹುಸೇನ್ ಶಾಫಿ (ಡೈರೆಕ್ಟರ್  ಸಹಾಯ್  ಬಜ್ಪೆ  ಸೆಂಟರ್) ಸ್ವಾಗತಿಸಿದರು. ಮನ್ಸೂರ್ ಸಅದಿ ಬಜ್ಪೆ  ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಅಶ್ರಫ್ ಕಿನಾರ ಮಂಗಳೂರು ಮಾತನಾಡಿದರು. ವೇದಿಕೆಯಲ್ಲಿ ಇಸ್ಮಾಯಿಲ್ ಜಾವಳೆ, ಹಾಜಿ ಬದ್ರುದ್ದೀನ್,  ನಝೀರ್ ಕಿನ್ನಿಪದವು, ಅಬ್ದುಲ್ ಕಾದರ್ ಜರಿ, ಹನೀಫ್ ಹಿಲ್ಟಾಪ್ ಹಾಗು ಇತರರು ಉಪಸ್ಥಿತರಿದ್ದರು.

ಬಜ್ಪೆ ಸರಕಾರಿ ಆಸ್ಪತ್ರೆಯ ಡಾ. ಶಂಕರ್ ನಾಯಕ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸ್ವಾಲಿಹ್  ಕೊಲಂಬೆ ವಂದಿಸಿದದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News