ಇ-ಇಸ್ಲಾಮಿಕ್ ರಿಫ್ರೇಷ್ ಕೋರ್ಸ್; ನ್ಯೂಶಮ್ಸ್ ಶಾಲಾ ವಿದ್ಯಾರ್ಥಿಗಳಿಗೆ ರ್ಯಾಂಕ್

Update: 2021-07-05 17:37 GMT

ಭಟ್ಕಳ : ಬೆಂಗಳೂರಿನ ಬೋರ್ಡ್ ಆಫ್ ಇಸ್ಲಾಮಿಕ್ ಎಜ್ಯುಕೇಷನ್ ಇತ್ತಿಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಇ-ಇಸ್ಲಾಮಿಕ್ ರಿಫ್ರೆಶ್ ಕೋರ್ಸಿನಲ್ಲಿ ಭಟ್ಕಳದ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳಾದ ಇಸ್ಮಾಯಿಲ್ ಡಾಟಾ ಮತ್ತು ಮುಹಮ್ಮದ್ ಗಿತ್ರೀಫ್ ರಿದಾ ಮಾನ್ವಿ ಕ್ರಮವಾಗಿ ದ್ವಿತೀಯ ಮತ್ತು  ತೃತೀಯ ರ್ಯಾಂಕ್ ಪಡೆದಿದ್ದಾರೆ.

ಸೋಮವಾರ ನ್ಯೂ ಶಮ್ಸ್ ಶಾಲೆಯ ಪ್ರಾಂಶುಪಾಲ ಲಿಯಾಖತ್ ಅಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆಯನ್ನು ವಿತರಿಸಿ ಮಾತನಾಡಿದ್ದು, ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಅವರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಲಾಗು ತ್ತಿದೆ. ಇಸ್ಲಾಮಿಕ್ ಪಠ್ಯಕ್ರಮದಲ್ಲಿ ಆನ್ ಲೈನ್ ಮೂಲಕ ನಡೆದ ಪರೀಕ್ಷೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಮತ್ತು ತೃತೀಯ ರ್ಯಾಂಕ್ ಪಡೆದಿರುವುದು ಸಂತಸ ತಂದಿದೆ ಎಂದರು.

ರ್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಇಸ್ಮಾಯಿಲ್ ಡಾಟಾ ಹಾಗೂ ಗಿತ್ರಿಫ್ ರಿದಾ ಮಾನ್ವಿ,  ತಮಗೆ ರ್ಯಾಂಕ್ ದೊರೆತಿದ್ದು ಅತೀವ ಸಂತೋಷವಾಗುತ್ತಿದೆ. ಅವಕಾಶ ಮಾಡಿಕೊಟ್ಟ ಶಾಲೆಯ ಪ್ರಾಂಶುಪಾಲರಿಗೂ ಹಾಗೂ ಪಾಲಕರಿಗೂ ಧನ್ಯವಾದ ಅರ್ಪಿಸಿದರು.

ಈ ಕುರಿತಂತೆ ವಾರ್ತಾಭಾರತಿಯೊಂದಿಗೆ  ದೂರವಾಣಿ ಮೂಲಕ ಮಾತನಾಡಿದ ಬೋರ್ಡ್ ಆಫ್ ಇಸ್ಲಾಮಿಕ್ ಎಜ್ಯುಕೇಶನ್ ಕಾರ್ಯದರ್ಶಿ ರಿಯಾಝ್ ಆಹ್ಮದ್ ಬೋರ್ಡ್ ಆಫ್ ಇಸ್ಲಾಮಿಕ್ ಸಂಸ್ಥೆಯ ಕಳೆದ 17 ವರ್ಷಗಳಿಂದ ವಿದ್ಯಾರ್ಥಿಗಳಿಗಾಗಿ ಇಸ್ಲಾಮಿಕ್ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ನಡೆಸುತ್ತಿದ್ದು ಸುಮಾರು 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯದ್ಯಂತ ವಿವಿಧ ಶಾಲಾ ಕಾಲೇಜುಗಳಿಂದ ಭಾಗವಹಿಸುತ್ತಾರೆ. ಕೋವಿಡ್ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ಇ-ರಿಫ್ರೆಶ್ ಕೋರ್ಸ್ ನಡೆಸಲಾಗಿತ್ತು. ಇದರಲ್ಲಿ ಭಟ್ಕಳದಿಂದ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಮತ್ತು ತೃತೀಯ ರ್ಯಾಂಕ್ ಗಳಿಸಿದ್ದಕ್ಕೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News