ಜು.7: ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಕೋವಿಡ್ ಲಸಿಕಾ ಶಿಬಿರ

Update: 2021-07-06 17:55 GMT

ಮಂಗಳೂರು, ಜು.6: ದ.ಕ.ಜಿಲ್ಲೆಯಲ್ಲಿ ಜು.7ರಂದು ವಿವಿಧ ಕಾಲೇಜಿನಲ್ಲಿ ನೋಂದಾಯಿಸಿರುವ ಪದವಿ ವಿದ್ಯಾರ್ಥಿಗಳು/ಬೋಧಕ ಮತ್ತು ಬೊಧಕೇತರ ಸಿಬ್ಬಂದಿಗಳಿಗೆ ಕೋವಿಡ್ ಪ್ರತಿರೋಧ ಲಸಿಕಾ ಶಿಬಿರ ನಡೆಯಲಿದೆ. ಫಲಾನುಭವಿಗಳು ಕಾಲೇಜಿನ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಅಥವಾ ಸರಕಾರ ನಿಗದಿಪಡಿಸಿದ ಇತರ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.

ಮಂಗಳೂರು ತಾಲೂಕಿನ ಮರೈನ್ ಕಾಲೇಜು ಕುಪ್ಪೆಪದವು, ಬ್ಯಾರೀಸ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಇನೋಳಿ, ಕ್ಸೇವಿಯರ್ ಐಟಿಐ ಕಾಲೇಜು ಅಸೈಗೋಳಿ, ಶ್ರೀೀನಿವಾಸ್ ಟೆಕ್ನಾಲಜಿ ಕಾಲೇಜು ವಳಚ್ಚಿಲ್, ಜಿಟಿಟಿಸಿ ಬೈಕಂಪಾಡಿ, ತ್ರಿಶಾ ಕಾಲೇಜು ಕುದ್ರೋಳಿ, ಮಹಾವೀರ ಕಾಲೇಜು ಮೂಡುಬಿದಿರೆ, ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಬೋಂದೆಲ್, ನಿರಂಜನ ಸ್ವಾಮಿ ಪಾಲಿಟೆಕ್ನಿಕ್ ಕಾಲೇಜು ಬಜ್ಪೆ, ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ವಾಮಂಜೂರು ಇಲ್ಲಿ ಲಸಿಕೆ ನೀಡಲಾಗುವುದು.

ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಆದ್ಯತಾ ಗುಂಪು, ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಬಂಟ್ವಾಳ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಶೀಲ್ಡ್ ಎರಡನೇ ಡೋಸ್ ಲಭ್ಯವಿದೆ. ಬೆಳ್ತಂಗಡಿ ತಾಲೂಕಿನ ತಾಲೂಕು ಆಸ್ಪತ್ರೆಯಲ್ಲಿ ಮಾತ್ರ ಲಸಿಕಾ ಶಿಬಿರವು ನಡೆಯಲಿದೆ. ಪುತ್ತೂರು ತಾಲೂಕಿನಲ್ಲಿ ಯಾವುದೇ ಲಸಿಕಾ ಶಿಬಿರವು ನಡೆಯುವುದಿಲ್ಲ.

ಸುಳ್ಯ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಅರಂತೋಡು ಹಾಗೂ ಜಿಎಚ್‌ಪಿ ಶಾಲೆ ಅರಂತೋಡು, ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಡಿಯಾಳ ಗ್ರಾಪಂ, ಸುಬ್ರಮಣ್ಯ ಆರೋಗ್ಯ ಕೇಂದ್ರದ ಏನಕಲ್ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗರು, ಪಂಜ ಹಾಗೂ ತಾಲೂಕು ಆಸ್ಪತ್ರೆಯ ಲಸಿಕಾ ಶಿಬಿರವು ಪುರಸಭೆಯಲ್ಲಿ ನಡೆಯಲಿದೆ.

ಮಂಗಳೂರು: ತಾಲೂಕಿನ ನಗರ ಆರೋಗ್ಯ ಕೇಂದ್ರಗಳಾದ ಬಂದರು, ಸುರತ್ಕಲ್, ಬೆಂಗರೆ, ಎಕ್ಕೂರು, ಕುಳಾಯಿ, ಜೆಪ್ಪು, ಪಡೀಲ್ ಶಕ್ತಿನಗರ ಹಾಗೂ ಬಿಜೈ ವ್ಯಾಪ್ತಿಯಲ್ಲಿ ಆಯ್ದ ವಾರ್ಡ್/ಸಂಘ ಸಂಸ್ಥೆಗಳಲ್ಲಿ ಕೋವಿಶೀಲ್ಡ್ ಎರಡನೇ ಡೋಸ್ ಲಭ್ಯವಿದೆ. ಜಿಲ್ಲಾ ವೆನ್ಳಾಕ್ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ 2ನೇ ಡೋಸ್ ಲಸಿಕಾ ಫಲಾನುಭವಿಗಳಿಗೆ ಹಾಗೂ ಎನ್‌ಆರ್‌ಐ ಫಲಾನುಭವಿಗಳಿಗೆ ಮಾತ್ರ ಲಸಿಕೆಯನ್ನು ನೀಡಲಾಗುವುದು. ಕೋವ್ಯಾಕ್ಸಿನ್ ಲಸಿಕೆಯು 45 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಡೋಸ್ ಮತ್ತು ಎರಡನೆಯ ಡೋಸ್ ಲಸಿಕೆ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News