ಕಾರ್ಕಳ: ಫಾ. ಅಲೆಕ್ಸಾಂಡರ್ ಲೂವಿಸ್ ರಿಗೆ ಬೀಳ್ಕೊಡುಗೆ

Update: 2021-07-07 14:20 GMT

ಕಾರ್ಕಳ: ಕಾರ್ಕಳ ತಾಲೂಕಿನ ಕಣಜಾರು ಚರ್ಚಿನ ಧರ್ಮಗುರುಗಳು ಹಾಗೂ ಶಾಲಾ ಸಂಚಾಲಕರಾದ ಫಾ. ಅಲೆಕ್ಸಾಂಡರ್ ಲೂವಿಸ್ ರವರು ಕಣಜಾರಿನಲ್ಲಿ 7 ವರ್ಷಗಳ ಸೇವೆಗೈದು ಈಗ ಬೆಳ್ವೆ ಚರ್ಚಿಗೆ ವರ್ಗಾವಣೆ ಆಗುವ ಸಂದರ್ಭ ಅವರನ್ನು ಬೀಳ್ಕೊಡುವ ಕಾರ್ಯಕ್ರಮ ಕಣಜಾರ್ ಚರ್ಚ್ ಸಭಾಂಗಣದಲ್ಲಿ ನಡೆಯಿತು. 

ಕಣಜಾರು ಚರ್ಚಿನ ಸರ್ವತೋಮುಖ ಅಭಿವೃದ್ಧಿಗಾಗಿ ಅವಿರತ ದುಡಿದು ಲೂರ್ಡ್ಸ್ ಅಂಗ್ಲ ಮಾಧ್ಯಮ ಶಾಲೆ ಯನ್ನು ಆರಂಬಿಸಿದ್ದು ಅವರ ಒಂದು ಸಾಧನೆ. ಹೇಗೆ ಒಂದು ಮೇಣ ಬತ್ತಿಯು ತನ್ನನ್ನು ತಾನೆ ಕರಗಿ ಇತರರಿಗೆ ಬೆಳಕನ್ನು ಕೊಡುತ್ತದೊ, ಅದೇ ರೀತಿ ಫಾ. ಅಲೆಕ್ಸಾಂಡರ್ ಲೂವಿಸ್ ರವರ ಜೀವನವು ಸಮಾಜದ ಒಳಿತಿಗಾಗಿ ಸಮರ್ಪಿಸಿದರು ಎಂದು ಜಾನೆಟ್ ಮೆನೆಜಸ್ ತಿಳಿಸಿದರು.  

ಈ ಸಂದರ್ಭದಲ್ಲಿ ಶಾಲು, ಫಲಪುಷ್ಪ, ಹಾರ ಹಾಗೂ ನೆನಪಿನ ಕಾಣಿಕೆಯಾಗಿ ಚಿನ್ನದ ಸರವನ್ನು ನೀಡಿ ಅವರನ್ನು ಗೌರವಿಸಲಾಯಿತು. 

ಶಾಲಾ ಅಧ್ಯಾಪಕ ವೃಂದದವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಚರ್ಚಿನ ನಿಕಟಪೂರ್ವ ಉಪಾಧ್ಯಕ್ಷ ಅಂಬ್ರೂಜ್ ಲೋಬೊ ರವರು ಸ್ವಾಗತಿಸಿದರು. ಜೆನೆಟ್ ಮಿನೇಜಸ್ ಮತ್ತು ಪ್ರಿಯಾ ಫೆರ್ನಾಂಡಿಸ್ ರವರು ಧರ್ಮಗುರುಗಳ ಬಗ್ಗೆ ಮಾತನಾಡಿದರು. ಬೊನಿಫಾಸ್ ಮತ್ತು ವಿಲಿಯಂ ಡಿಸೋಜ ರವರು ವಿದಾಯ ಗೀತೆಯನ್ನು ಹಾಡಿದರು.

ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಜಾಸ್ಮಿನ್ ಪಿಂಟೊ, ಸಿಸ್ಟರ್ ಸುಪೀರಿಯರ್ ಕಾರಿಟಾ, ಮೇಬಲ್, ಮರ್ವಿನ್ ಡಿಸೋಜ ಉಪಸ್ಥಿತರಿದ್ದರು. ಕಾರ್ಯಕ್ರಮನ್ನು ಚರ್ಚಿನ ಮಾಜಿ ಉಪಾಧ್ಯಕ್ಷ ರೋಬರ್ಟ್ ಮಿನೇಜಸ್ ರವರು ನಿರೂಪಿಸಿದರು. ಮರಿಯಾ ಸಲ್ದಾನ ರವರು ಧನ್ಯವಾದ ನೀಡಿದರು. ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News