ಉಡುಪಿ ನಗರಸಭೆ ಕಾರ್ಯಾಚರಣೆ; ವಿರೋಧದ ಮಧ್ಯೆಯೂ ಬ್ರಹ್ಮಗಿರಿಯ ಗೂಡಂಗಡಿಗಳ ತೆರವು

Update: 2021-07-10 14:55 GMT

ಉಡುಪಿ, ಜು.10: ಸಾಕಷ್ಟು ವಿರೋಧದ ಮಧ್ಯೆಯೂ ನಗರದ ಬ್ರಹ್ಮಗಿರಿ ಸರ್ಕಲ್ ಸುತ್ತಮುತ್ತಲಿನ ಒಟ್ಟು ಐದು ಕಡೆ ಸರಕಾರಿ ಜಾಗದಲ್ಲಿದ್ದ ಏಳೆಂಟು ಗೂಡಂಗಡಿಗಳನ್ನು ಉಡುಪಿ ನಗರಸಭೆ ಅಧಿಕಾರಿಗಳು ಇಂದು ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ಕಾರ್ಯಾಚರಣೆ ಮೂಲಕ ತೆರವುಗೊಳಿಸಿರುವ ಬಗ್ಗೆ ವರದಿ ಯಾಗಿದೆ.

ಈ ಹಿಂದೆ ಜೂ.5ರಂದು ಅನಧಿಕೃತವಾಗಿ ಗೂಡಂಗಡಿ ಸ್ಥಾಪಿಸಿ ಮೀನಿನ ವ್ಯಾಪಾರ ನಡೆಸುತ್ತಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ದಲಿತ ಮಹಿಳೆ ರಾಧಾ ಅಶೋಕ್‌ರಾಜ್ ಎಂಬವರ ಗೂಡಂಗಡಿಯನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿ, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರುಗಳು ದಾಖಲಾಗಿ ದ್ದವು. ಇದಕ್ಕೆ ದಲಿತ ಸಂಘಟನೆಗಳು ಕೂಡ ವಿರೋಧ ವ್ಯಕ್ತಪಡಿಸಿದ್ದವು. ಅದರ ನಂತರ ನಗರಸಭೆ ಅಧಿಕಾರಿಗಳು ಈ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರು.

ಇದೀಗ ಪೊಲೀಸ್ ಬಿಗಿ ಭದ್ರತೆಯಲ್ಲಿ ಮತ್ತೆ ಕಾರ್ಯಾಚರಣೆ ನಡೆಸಿದ ನಗರಸಭೆ ಅಧಿಕಾರಿಗಳು, ರಾಧಾ ಅವರ ಮೀನಿನ ಅಂಗಡಿ ಸೇರಿದಂತೆ ಏಳೆಂಟು ಗೂಡಂಗಡಿಗಳನ್ನು ತೆರವುಗೊಳಿಸಿದರು. ಅದೇ ರೀತಿ ಗ್ಯಾರೇಜ್ ಸೇರಿದಂತೆ ಕೆಲವು ಅಂಗಡಿಗಳ ಸರಕಾರಿ ಜಾಗಕ್ಕೆ ವಿಸ್ತರಣೆ ಮಾಡಿರುವ ತಗಡು ಶೀಟು ಗಳನ್ನು ಕೂಡ ತೆರವುಗೊಳಿಸಲಾಯಿತು.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಶೋಕ್ ರಾಜ್ ತೆರವು ಕಾರ್ಯಾ ಚರಣೆಗೆ ವಿರೋಧ ವ್ಯಕ್ತಪಡಿಸಿದರು. ಯಾವುದೇ ನೋಟೀಸ್ ನೀಡದೆ ಏಕಾಏಕಿ ತೆರವುಗೊಳಿಸಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ಅವರು ಸೊತ್ತುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆಯಲು ಮುಂದಾದರು. ಬಳಿಕ ಸ್ಥಳದಲ್ಲಿದ್ದ ಪೊಲೀಸರು ಅಶೋಕ್ ರಾಜ್ ಅವರನ್ನು ವಶಕ್ಕೆ ಪಡೆದು ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಡಾ.ಉದಯ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ರಾಜ್, ಕಂದಾಯ ಅಧಿಕಾರಿ ಧನಂಜಯ, ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುವಾರ್ ಮೊದಲಾದವರು ಹಾಜರಿದ್ದರು.

''ಲಾಕ್‌ಡೌನ್‌ನಿಂದ ಕೆಲಸ ಇಲ್ಲದ ಕಾರಣಕ್ಕೆ ಪತ್ನಿಯ ಹೆಸರಿನಲ್ಲಿದ್ದ ಪರವಾನಿಗೆ ಯಲ್ಲಿ ಮೀನಿನ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದೆವು. ಇದರಲ್ಲಿ ಸರಿಯಾದ ವ್ಯಾಪಾರವೂ ನಡೆಯದೆ ಕಷ್ಟದ ಜೀವನ ಸಾಗಿಸುತ್ತಿದ್ದೇವೆ. ಈ ಹಿಂದೆ ನಮ್ಮ ಅಂಗಡಿ ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿ ದೂರು ಪ್ರತಿದೂರುಗಳು ದಾಖಲಾಗಿದ್ದವು. ಅದರ ಮಧ್ಯೆಯೇ ಇವರು ಬೆಳಗಿನ ಜಾವ ನೂರಾರು ಪೊಲೀಸರ ಭದ್ರತೆ ಯೊಂದಿಗೆ ಬಂದು, ಯಾವುದೇ ನೋಟೀಸ್ ನೀಡದೆ ಅಂಗಡಿಯನ್ನು ತೆಗೆದುಕೊಂಡು ಹೋಗಿದ್ದಾರೆ''.

-ಅಶೋಕ್‌ರಾಜ್ ಕಾಡಬೆಟ್ಟು

‘ಬೆಳಗಿನ ಜಾವ ಆರು ಗಂಟೆಗೆ ಆರಂಭಗೊಂಡ ಕಾರ್ಯಾಚರಣೆ 7.10ಕ್ಕೆ ಪೂರ್ಣಗೊಂಡಿತು. ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಬಂದ ಹಿನ್ನೆಲೆ ಯಲ್ಲಿ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು. ಇದೀಗ ಅಂಗಡಿಗಳು ನಗರಸಭೆ ಸುಪರ್ದಿಯಲ್ಲಿದ್ದು, ಸಂಬಂಧಪಟ್ಟವರು ದಂಡ ಪಾವತಿಸಿ ಅದನ್ನು ತೆಗೆದುಕೊಳ್ಳಬಹುದು. ಇಲ್ಲ ದಿದ್ದರೆ ಕಾನೂನು ಪ್ರಕಾರ ವಿಲೇವಾರಿ ಮಾಡಲಾಗುವುದು’

-ಮೋಹನ್‌ರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರ, ನಗರಸಭೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News