ಭಾಷಾಭಿಮಾನ ಬೆಳೆಸುವಲ್ಲಿ ತುಳು ಅಕಾಡಮಿ ಪಾತ್ರ ಹಿರಿದು : ಡಾ. ಮೋಹನ್ ಆಳ್ವ

Update: 2021-07-14 14:13 GMT

ಮಂಗಳೂರು, ಜು. 14: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವಿಶೇಷ ಸಂಯೋಜನೆಯಲ್ಲಿ ವಿಶ್ವದ ವಿವಿಧ ತುಳು ಸಂಘಟನೆಗಳ ಪ್ರಮುಖರ ಅಂತರ್ಜಾಲ ತುಳು ವಿಚಾರಗೋಷ್ಠಿಯ ಸರಣಿ ಕಾರ್ಯಕ್ರಮಕ್ಕೆ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ತುಳು ಅತ್ಯಂತ ಪ್ರಾಚೀನ ಹಾಗೂ ಪರಂಪರೆಯ ಭಾಷೆಯಾಗಿದ್ದು ತುಳುನಾಡಿನ ಸಂಸ್ಕೃತಿ-ಸಂಸ್ಕಾರ ವನ್ನು ಉಳಿಸಿ ಬೆಳೆಸುವಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪಾತ್ರ ಹಿರಿದು. ವಿಶ್ವ ಮಟ್ಟದಲ್ಲಿನ ತುಳು ಸಂಘಟಕರನ್ನು ಇಂದಿನ ಸಾಮಾಜಿಕ ಜಾಲತಾಣದ ಮೂಲಕ ಒಂದೇ ವೇದಿಕೆಗೆ ಕರೆತರುವ ಪ್ರಾಮಾಣಿಕ ಪ್ರಯತ್ನ ಶ್ಲಾಘನೀಯ ಎಂದು ಅವರು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಥಮ ವಿಚಾರ ಗೋಷ್ಠಿಯಲ್ಲಿ ತುಳುನಾಡಿನ ಕಟ್ಟುಕಟ್ಟಲೆ ಎಂಬ ವಿಷಯದಲ್ಲಿ ಹಿರಿಯ ಸಾಹಿತಿ, ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಅವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News