​ಕಾರ್ಮಿಕ ಇಲಾಖೆ ಕಿಟ್ ಗ್ರಾಪಂಗೆ ನೀಡದ ಬಿಜೆಪಿ ಬೆಂಬಲಿತ ಸದಸ್ಯನ ವಿರುದ್ಧ ದೂರು

Update: 2021-07-14 14:59 GMT

ಉಡುಪಿ, ಜು.14: ಕಾರ್ಮಿಕ ಇಲಾಖೆಯ ಕಿಟ್‌ಗಳನ್ನು ಅಲೆವೂರು ಗ್ರಾಮ ಪಂಚಾಯತ್‌ಗೆ ತಲುಪಿಸದ ಬಗ್ಗೆ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹಾಗೂ ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ವಿರುದ್ಧ ಅಲೆವೂರು ಗ್ರಾಪಂ ಅಧ್ಯಕ್ಷೆ ಪುಷ್ಪಾ ಅಂಚನ್ ಉಡುಪಿ ಜಿಲ್ಲಾಧಿಕಾರಿ ಹಾಗೂ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಲೆವೂರು ಗ್ರಾಪಂ ವ್ಯಾಪ್ತಿಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೆಲವು ದಿನಗಳ ಹಿಂದೆ 200 ಆಹಾರ ಕಿಟ್‌ಗಳು ಬಂದಿವೆ ಎಂದು ಕಾರ್ಮಿಕ ಇಲಾಖೆ ನಿರೀಕ್ಷಕ ಪ್ರವೀಣ್ ಮಲ್ಯ, ಗ್ರಾಪಂ ಕಾರ್ಯದರ್ಶಿಯವರಿಗೆ ಕರೆ ಮಾಡಿ ತಿಳಿಸಿದ್ದರು. ಆದರೆ ಗ್ರಾಪಂನಿಂದ ಕಿಟ್ ಸಾಮಾಗ್ರಿ ಗಳನ್ನು ತರಲು ವಾಹನ ಕಳುಹಿಸುವ ಮೊದಲೇ ಬೇರೆಯವರಿಗೆ ಕಿಟ್ ಸಾಮಾಗ್ರಿಗಳನ್ನು ನೀಡಿರುವುದು ಮತ್ತು ಪಡೆದುಕೊಂಡವರು ಅವುಗಳನ್ನು ಗ್ರಾಪಂಗೆ ನೀಡದೆ ಬೇರೆ ಕಡೆಯಲ್ಲಿ ಇಟ್ಟುೊಂಡಿರುವುದು ಗಮನಕ್ಕೆ ಬಂದಿದೆ.

ಈ ಬಗ್ಗೆ ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಿದಾಗ ಗ್ರಾಪಂ ಸದಸ್ಯ ಶ್ರೀಕಾಂತ್ ನಾಯಕ್ ಕಿಟ್‌ಗಳನ್ನು ಗ್ರಾಪಂಗೆ ತಲುಪಿಸುವುದಾಗಿ ಹೇಳಿ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು. ಆದರೆ ಶ್ರೀಕಾಂತ್ ನಾಯಕ್ ಅವುಗಳನ್ನು ಗ್ರಾಪಂಗೆ ತಲುಪಿಸಿರುವುದಿಲ್ಲ. ಈ ಬಗ್ಗೆ ತಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷೆ ಪುಷಾ್ಪ ಅಂಚನ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News