ಮಂಗಳೂರು : ಅಕ್ರಮ ಚಿನ್ನ ಸಾಗಾಟ; ಇಬ್ಬರು ಆರೋಪಿಗಳು ಸೆರೆ

Update: 2021-07-15 08:54 GMT

ಮಂಗಳೂರು : ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು, ಸುಮಾರು 34.46 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆದಿದ್ದಾರೆ.

ಕೇರಳದ ಅನ್ಸಾರ್ ಹಾಗೂ ಮೂಸಾ ಮಿಯಾಸ್ ಬಂಧಿತರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಬ್ಬರೂ ಸೂಟ್‌ಕೇಸ್‌ನ ತಳಭಾಗದಲ್ಲಿ ಚಿನ್ನವನ್ನು ಅಡಗಿಸಿ ಇಟ್ಟಿದ್ದರು. ತಪಾಸಣೆಗೆ ಒಳಪಡಿಸಿದಾಗ ಒಟ್ಟು 34,46,464 ರೂ. ಮೌಲ್ಯದ 702 ಗ್ರಾಂ‌‌ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕಸ್ಟಮ್ಸ್ ಉಪ ಆಯುಕ್ತ ಪ್ರವೀಣ ಕಂಡಿ, ಅಧಿಕಾರಿಗಳಾದ‌ ನಾಗೇಶ್ ಕುಮಾರ್, ಮನೋ ಕಾತ್ಯಾಯಿನಿ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News