ಮಂಗಳೂರು : ಕಳವು ಪ್ರಕರಣಗಳ ಆರೋಪಿಗಳ ಪರೇಡ್

Update: 2021-07-15 12:02 GMT

ಮಂಗಳೂರು, ಜು.15: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿ 252 ಆರೋಪಿಗಳನ್ನು ಗುರುವಾರ ಪರೇಡ್ ನಡೆಸಲಾಯಿತು.

ವಾಹನ ಕಳವು, ಮನೆಗಳ್ಳತನ, ಸರಗಳ್ಳತನ, ಜಾನುವಾರು ಕಳ್ಳತನ, ಧಾರ್ಮಿಕ ಕೇಂದ್ರಗಳಲ್ಲಿ ಕಳ್ಳತನ ಇತ್ಯಾದಿ ಪ್ರಕರಣದ ಆರೋಪಿಗಳ ಸದ್ಯದ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಕೋವಿಡ್-19 ಮತ್ತು ಲಾಕ್‌ಡೌನ್ ಅಡ್ಡಿಯಾಗಿತ್ತು. ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪಾಯುಕ್ತ ಬಿ.ಪಿ. ದಿನೇಶ್ ಕುಮಾರ್ ಗುರುವಾರ ವಿವಿಧ ಪ್ರಕರಣದ 252 ಆರೋಪಿಗಳನ್ನು ಪರೇಡ್ ನಡೆಸಿದರು. ಸದ್ಯ ಆರೋಪಿಗಳು ಯಾವ್ಯಾವ ಜೀವನ ಕಸಬುಗಳನ್ನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರಲ್ಲದೆ, ಯಾವುದೇ ಪ್ರಕರಣ ಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದರು.

ಈಗಾಗಲೆ ಈ ಆರೋಪಿಗಳಿಂದ 179 ಮೊಬೈಲ್‌ಗಳು ಮತ್ತು 67 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News