ಉಡುಪಿ: ಕೋವಿಡ್-19 ಲಸಿಕೆ ಲಭ್ಯತೆ ಕುರಿತ ವಿವರ

Update: 2021-07-18 12:08 GMT

ಉಡುಪಿ, ಜು.18: ಜಿಲ್ಲೆಯ ಕೊರೋನ ಮುಂಚೂಣಿ ಕಾರ್ಯಕರ್ತರು/ ದುರ್ಬಲ ಗುಂಪಿನ ಫಲಾನುಭವಿಗಳು/ಆದ್ಯತಾ ಗುಂಪಿನವರು ಮತ್ತು ಆರೋಗ್ಯ ಕಾರ್ಯಕರ್ತರು/ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರುಗಳಿಗೆ ಹಾಗೂ 45ವರ್ಷ ಮೇಲ್ಪಟ್ಟ ಸಾರ್ವಜನಿ ಕರಿಗೆ /ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ, ವಿಕಲಚೇತನರಿಗೆ ಮತ್ತು ಅವರ ಆರೈಕೆದಾರರಿಗೆ ಮತ್ತು ಎಸ್‌ಎಎಂ, ಎಂಎಎಂ ಮಕ್ಕಳ ಆರೈಕೆದಾರರಿಗೆ ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕೆ ಲಭ್ಯ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಉಡುಪಿ ಅಜ್ಜರಕಾಡು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ(ಜಿಲ್ಲಾ ಆಸ್ಪತ್ರೆಯ ಹಿಂಭಾಗ)ದಲ್ಲಿ ಕೋವಿಶೀಲ್ಡ್ -200, ಕುಕ್ಕಿಕಟ್ಟೆ ಎಫ್.ಪಿ.ಎ.ಐ(ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ)ಯಲ್ಲಿ ಕೋವಿಶೀಲ್ಡ್ -280, ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ(ಮಾಧವ ಕೃಪಾ ಶಾಲೆ, ಮಣಿಪಾಲ)ದಲ್ಲಿ ಕೋವಿಶೀಲ್ಡ್ -75, ಉಡುಪಿ ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆಯಲ್ಲಿ ಜು.25ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದ ವರಿಗೆ 2ನೇ ಡೋಸ್ ಕೋವಿ ಶೀಲ್ಡ್ -100 ಡೋಸ್ ಲಭ್ಯ ಇದೆ.

ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತ ಪಡಿಸಿ ಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News