ಕೊಂಕಣ ರೈಲ್ವೆ: ಎರಡು ರೈಲುಗಳ ಸಂಚಾರ ರದ್ದು

Update: 2021-07-18 14:59 GMT

ಉಡುಪಿ, ಜು.18: ಮಂಗಳೂರು ಹೊರವಲಯದ ಕುಲಶೇಖರದಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಪೂರ್ಣ ಗೊಂಡು ರೈಲು ಸಂಚಾರ ರವಿವಾರ ಪುನರಾರಂಭಗೊಂಡಿದ್ದರೂ, ಕೊಂಕಣ ರೈಲ್ವೆ ನಿಗಮ ನಾಳೆಯ ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.

ರೈಲು ನಂ.06163 ಲೋಕಮಾನ್ಯ ತಿಲಕ್-ಕೊಚ್ಚುವೇಲಿ ನಡುವೆ ವಾರಕ್ಕೆರಡು ಬಾರಿ ಸಂಚರಿಸುವ ವಿಶೇಷ ರೈಲಿನ ಸಂಚಾರವನ್ನು ಜು.19ರಂದು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಅದೇ ರೀತಿ ರೈಲು ನಂ.06345 ಲೋಕಮಾನ್ಯ ತಿಲಕ್-ತಿರುವನಂತಪುರಂ ಸೆಂಟ್ರಲ್ ‘ನೇತ್ರಾವತಿ’ ದೈನಂದಿನ ರೈಲಿನ ಜು.20ರ ಸಂಚಾರ ವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಎಲ್.ವರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News