ಮಂಗಳೂರು-ಕಾಸರಗೋಡು ಬಸ್ ಸೇವೆ ಪುನಾರಂಭ

Update: 2021-07-19 12:52 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜು.19: ಕೋವಿಡ್ ಲಾಕ್‌ಡೌನ್ ಆರಂಭದ ವೇಳೆ ಸ್ಥಗಿತಗೊಂಡಿದ್ದ ಮಂಗಳೂರು- ಕಾಸರಗೊಡು ಅಂತಾರಾಜ್ಯ ಬಸ್ ಸೇವೆ ಸೋಮವಾರ ಪುನಾರಂಭಗೊಂಡಿದೆ.

ಕರ್ನಾಟಕದಲ್ಲಿ ಎಸೆಸೆಲ್ಸಿ ಪರೀಕ್ಷೆ ಆರಂಭಗೊಳ್ಳುವ ದಿನ ಅಂತಾರಾಜ್ಯ ಬಸ್ ಓಡಾಟ ಆರಂಭಿಸಿದೆ. ಇದರಿಂದ ದ.ಕ. ಜಿಲ್ಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳು ನಿರಾಳವಾಗಿ ಮತ್ತು ಉಚಿತ ಪ್ರಯಾಣ ನಡೆಸಿ ಗಡಿ ದಾಟಿ ಪರೀಕ್ಷೆ ಬರೆದು ವಾಪಸಾದರು.

20 ಬಸ್ ಕಾರ್ಯಾಚರಣೆ: ‘ಮಂಗಳೂರು- ಕಾಸರಗೋಡು ನಡುವೆ ಕರ್ನಾಟಕದ 36 ಬಸ್‌ಗಳು ಸಂಚರಿಸುತ್ತಿದ್ದು, ಮೊದಲ ದಿನ ಸೋಮವಾರ 20 ಬಸ್‌ಗಳು ಮಾತ್ರ ಸಂಚರಿಸಿವೆ. ಮುಂದಿನ ದಿನಗಳಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು. ಕೇರಳದ ಬಸ್‌ಗಳು ಕೂಡ ಈ ಮಾರ್ಗದಲ್ಲಿ ಸಂಚಾರ ಪುನರಾರಂಭಿಸಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಸ್.ಅರುಣ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News