ಗೃಹರಕ್ಷಕ ಸಿಬ್ಬಂದಿಗಳ ಬೇಡಿಕೆ ಈಡೇರಿಕೆಯ ಭರವಸೆ: ಲಾಲಾಜಿ ಮೆಂಡನ್

Update: 2021-07-20 12:20 GMT

ಕಾಪು: ಸಮಾಜದ ಜನರಲ್ಲಿ ಶಿಸ್ತು ಮತ್ತು ಕಾನೂನ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಸಹಿತವಾಗಿ ಬಹುತೇಕ ಎಲ್ಲಾ ಇಲಾಖೆಗಳಲ್ಲೂ ಉತ್ತಮವಾಗಿ ಸೇವೆ ಸಲ್ಲಿಸುವ ಗೃಹರಕ್ಷಕದಳದ ಸಿಬಂದಿಗಳ ಸೇವೆ ಸ್ಮರಣೀಯವಾಗಿದೆ. ಶಿಸ್ತಿನ ಸಿಪಾಯಿಗಳಂತೆ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕದಳದ ಸಿಬಂದಿಗಳ ಬೇಡಿಕೆಗಳನ್ನು ಈಡೇರಿಸಲು ಸರಕಾರಕ್ಕೆ ವಿಶೇಷ ಮನವಿ ಮಾಡುವುದಾಗಿ ಶಾಸಕ ಲಾಲಾಜಿ ಆರ್. ಮೆಂಡನ್ ಭರವಸೆ ನೀಡಿದರು. 

ಅವರು ಬುಧವಾರ ಗೃಹರಕ್ಷಕದಳ ಕಾಪು ಘಟಕದ ವತಿಯಿಂದ ಅಭಿನಂದನಾ ಸಮಾರಂಭ ಮತ್ತು ವನಮಹೋತ್ಸವ ಕಾರ್ಯಕ್ರಮವುದಲ್ಲಿ ಭಾಗವಹಿಸಿ ಮಾತನಾಡಿದರು. 

ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ.ಕೆ. ಪ್ರಶಾಂತ್ ಶೆಟ್ಟಿ ಮಾತನಾಡಿ, ಗೃಹರಕ್ಷಕದಳದ ಸಿಬಂದಿಗಳನ್ನು ಪೊಲೀಸ್ ಇಲಾಖೆ ಸಹಿತ ವಿವಿಧ ಇಲಾಖೆಗಳಲ್ಲಿನ ಕರ್ತವ್ಯಕ್ಕೆ ಹೆಚ್ಚು ಹೆಚ್ಚಾಗಿ ನಿಯೋಜಿಸಿಕೊಳ್ಳುವಂತೆ ಮತ್ತು ಸಮಾನ ಗೌರವ ಭತ್ಯೆ ದೊರಕಿಸಿಕೊಡಲು ಸರ್ಕಾರಕ್ಕೆ ಒತ್ತಡ ಹೇರುವಂತೆ ಶಾಸಕರಲ್ಲಿ ಮನವಿ ಮಾಡಿದರು. 

ಕಾಪು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಉಪನಿರೀಕ್ಷಕ ತಿಮ್ಮೇಶ್ ಬಿ.ಎನ್., ಗೃಹರಕ್ಷಕದಳದ ಸಹಾಯಕ ಕಮಾಂಡೆಂಟ್ ರಮೇಶ್ ಕುಮಾರ್, ಮಾಜಿ ಘಟಕಾಧಿಕಾರಿ ಸದಾಶಿವ ಶೇರ್ವೆಗಾರ್, ದಂಡತೀರ್ಥ ವಿದ್ಯಾಸಂಸ್ಥೆಗಳ ಪ್ರಾಂಶುಪಾಲೆ ವರ್ಷಾ ಪ್ರಭು ಅತಿಥಿಗಳಾಗಿ ಭಾಗವಹಿಸಿದ್ದರು.

ಸಮ್ಮಾನ: ಮುಖ್ಯಮಂತ್ರಿಗಳ ಚಿನ್ನದ ಪ್ರಶಸ್ತಿ ಪುರಸ್ಕೃತರಾದ ಉಡುಪಿ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ.ಕೆ. ಪ್ರಶಾಂತ್ ಶೆಟ್ಟಿ, ಕಾಪು ಘಟಕಾಧಿಕಾರಿ ಲಕ್ಷ್ಮೀ ನಾರಾಯಣ ರಾವ್ ಹಾಗೂ ಸಾಧಕ ಸಿಬಂದಿಗಳಾದ ಇದಿನಬ್ಬ, ವೆಂಕಟರಮಣ, ಸೋಮನಾಥ, ಅಶೋಕ್ ಕುಮಾರ್, ಮಹೇಶ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. 

ಗೃಹರಕ್ಷಕದಳದ ಕಾಪು ಘಟಕಾಧಿಕಾರಿ ಲಕ್ಷ್ಮೀನಾರಾಯಣ ರಾವ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಗೃಹರಕ್ಷಕದಳದ ಸಿಬಂದಿ ರಾಜೇಂದ್ರ ವಂದಿಸಿದರು. ದಂಡತೀರ್ಥ ಪ.ಪೂ. ಕಾಲೇಜಿನ ಉಪನ್ಯಾಸಕ ಶಿವಣ್ಣ ಬಾಯಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News