ಜು. 26ರಿಂದ ಸಮಸ್ತ ಫಾಳಿಲಾ ಪಬ್ಲಿಕ್ ಪರೀಕ್ಷೆ

Update: 2021-07-24 15:20 GMT

ಮಂಗಳೂರು : ಜುಲೈ 26ರಿಂದ 29ರ ತನಕ ಸಮಸ್ತ ವಿಮೆನ್ಸ್ ಇಸ್ಲಾಮಿಕ್  ಆರ್ಟ್ಸ್ ಕಾಲೇಜ್ ಫಾಳಿಲಾ ಕೋರ್ಸಿನ ಪ್ರಥಮ ಹಾಗೂ ದ್ವಿತೀಯ ವರ್ಷದ ಪಬ್ಲಿಕ್ ಪರೀಕ್ಷೆ ನಡೆಯಲಿದೆ.

ಸಮಸ್ತ ಅಂಗೀಕೃತ 91 ಮಹಿಳಾ ಶರೀಹತ್ ಕಾಲೇಜುಗಳು ಕಾರ್ಯಾಚರಿಸುತ್ತಿತ್ತು 64 ಕೇಂದ್ರಗಳಲ್ಲಿ ಪರೀಕ್ಷೆ ನಿಗದಿಪಡಿಸಲಾಗಿದೆ.  ಫಾಳಿಲಾ  ಪ್ರಥಮ ವರ್ಷದವರಿಗೆ 26ರಂದು ಅಪರಾಹ್ನ 2 ಗಂಟೆಯಿಂದ ಮೊದಲ ಪರೀಕ್ಷೆ ಪ್ರಾರಂಭವಾಗಿ ನಂತರದ ದಿನಗಳಲ್ಲಿ ಬೆಳಗ್ಗೆ ಮತ್ತು ಅಪರಾಹ್ನ ಎರಡು ಪರೀಕ್ಷೆಗಳಂತೆ ಒಟ್ಟು ಏಳು ವಿಷಯಗಳಲ್ಲಿ ಪರೀಕ್ಷೆ ನಡೆಯಲಿದೆ. ದ್ವಿತೀಯ ವರ್ಷದವರಿಗೆ 27ರಂದು ಬೆಳಗ್ಗೆ 10 ಗಂಟೆಗೆ ಆರಂಭವಾಗಿ ಒಟ್ಟು ಆರು ವಿಷಯದಲ್ಲಿ ಪರೀಕ್ಷೆ ನಡೆಯಲಿದೆ. 

ಕೋವಿಡ್ ಮಾರ್ಗಸೂಚಿಯಂತೆ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು,  ಆಡಳಿತ ಸಮಿತಿ ಹಾಗೂ ಅಧ್ಯಾಪಕ ವೃಂದದವರಿಗೆ ಪರೀಕ್ಷಾ ಗೈಡೆನ್ಸ್ ಮತ್ತು ಪರೀಕ್ಷಾರ್ಥಿಗಳಿಗಿರುವ ಹಾಲ್ ಟಿಕೆಟ್ ಈಗಾಗಲೇ ನೀಡಲಾಗಿದೆ.

ಫಾಳಿಲಾ ಮಹಿಳಾ ಶಿಕ್ಷಣ ಯೋಜನೆ ಪ್ರಾರಂಭವಾಗಿ ಎರಡು ವರ್ಷ ಪೂರ್ಣಗೊಂಡು ಯಶಸ್ವಿ ಮೂರನೇ ವರ್ಷದಲ್ಲಿ ಮುಂದುವರಿಯುತ್ತಿದ್ದು  ಕೋವಿಡ್ ಸನ್ನಿವೇಶದಲ್ಲಿ ಆನ್ಲೈನ್ ಶಿಕ್ಷಣವನ್ನು ನೀಡಿ ಇದೇ ಮೊದಲ ಬಾರಿಗೆ ಪಬ್ಲಿಕ್ ಪರೀಕ್ಷೆ ನಡೆಯುತ್ತಿದೆ.

ಕೋವಿಡ್  ಕಾರಣವಾಗಿ ಪ್ರಸ್ತುತ ದಿನಾಂಕಗಳ ಪರೀಕ್ಷೆಗಳಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೆ ಫಲಿತಾಂಶದ ನಂತರ 'ಸೇ'  ಮತ್ತು ಸ್ಪೆಷಲ್ ಪರೀಕ್ಷೆಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆ ಪಾಳಿಲ ಪರೀಕ್ಷಾ ಅಧೀಕ್ಷಕರಾದ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News