ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಗೈಡ್-2021: ಮೂರನೇ ಹಂತದ ಆನ್‌ಲೈನ್ ಲೀಡರ್ಸ್ ಟ್ರೈನಿಂಗ್

Update: 2021-08-01 11:09 GMT

ಸುರತ್ಕಲ್, ಆ.1: ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಇದರ ವತಿಯಿಂದ ಮೂರನೇ ಹಂತದ ‘ಗೈಡ್-2021’ ಆನ್‌ಲೈನ್ ತರಗತಿಯು ಜು.29ರಿಂದ ಜು.31ರ ತನಕ ಮೂರು ದಿನಗಳ ಕಾಲ ಗೂಗಲ್ ಮೀಟ್ ಮೂಲಕ ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಅಧ್ಯಕ್ಷ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ ಶೇಡಿಗುರಿಯ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಎಸ್‌ವೈಎಸ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಅಧ್ಯಕ್ಷ ಕೆ.ಪಿ.ಮನ್ಸೂರ್ ಹಿಮಮಿ ಮೊಂಟೆಪದವು, ಕೇರಳ ಮುಸ್ಲಿಂ ಜಮಾಅತ್ ಮಲಪ್ಪುರಂ ಜಿಲ್ಲಾಧ್ಯಕ್ಷ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ವಿವಿಧ ವಿಷಯಗಳಲ್ಲಿ ತರಗತಿ ನಡೆಸಿದರು.

ಅತಿಥಿಗಳಾಗಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಹುಸೈನ್ ಸಅದಿ ಹೊಸ್ಮಾರ್, ಕೆಸಿಎಫ್ ನಾಯಕರಾದ ಫಾರೂಕ್ ಕಾಟಿಪಳ್ಳ, ಎಸ್‌ವೈಎಸ್ ಕೃಷ್ಣಾಪುರ ಸೆಂಟರ್ ಉಪಾಧ್ಯಕ್ಷ ಅಶ್ರಫ್ ಸಖಾಫಿ ಅಲ್ ಫುರ್ಖಾನಿ, ಎಸ್ಸೆಸ್ಸೆಫ್ ದ.ಕ. ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೈದರ್ 4ನೇ ಬ್ಲಾಕ್ ಕಾಟಿಪಳ್ಳ, ಎಸ್ಸೆಸ್ಸೆಫ್ ದ.ಕ. ವೆಸ್ಟ್ ಜಿಲ್ಲಾ ದಅವಾ ಕಾರ್ಯದರ್ಶಿ ಆರೀಫ್ ಝುಹುರಿ ಮುಕ್ಕ, ಎಸ್ಸೆಸ್ಸೆಫ್ ದ.ಕ. ವೆಸ್ಟ್ ಜಿಲ್ಲಾ ದಅವಾ ಕನ್ವೀನರ್ ಉಮರ್ ಫಾರೂಕ್ ಸಖಾಫಿ ಕಾಟಿಪಳ್ಳ, ಎಸ್ಸೆಸ್ಸೆಫ್ ದ.ಕ. ವೆಸ್ಟ್ ಜಿಲ್ಲಾ ಸದಸ್ಯ ರಫೀಕ್ 3ನೇ ಬ್ಲಾಕ್ ಕಾಟಿಪಳ್ಳ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News