‘ಕುಶಿಯೋನ್ ಕಾ ಆಶಿಯಾನಾ’ ಕಿರುಚಿತ್ರ ಸ್ಪರ್ಧೆ

Update: 2021-08-02 14:30 GMT

ಉಡುಪಿ, ಆ.2: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಜೀವನದಲ್ಲಿ ತಂದ ಬದಲಾವಣೆಗಳು ಎಂಬ ವಿಷಯದ ಕುರಿತು ಕಿರುಚಿತ್ರ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ ಫಲಾನುಭವಿಗಳು, ವಿದ್ಯಾರ್ಥಿ ಗಳು, ಆಸಕ್ತ ಯುವಕರು ಹಾಗೂ ಸಂಸ್ಥೆಗಳು ಭಾಗವಹಿಸಬಹುದಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿ ರಬೇಕು. ಈ ಸ್ವರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಆನ್‌ಲೈನ್ ಮೂಲಕ -http://pmay-urban.gov.in - ವೈಬ್‌ಸೈಟ್‌ನಲ್ಲಿ ಆಗಸ್ಟ್ 10ರ ಸಂಜೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಎಲ್ಲಾ ಸ್ಪರ್ಧಾರ್ಥಿಗಳು ನಗರ ಸ್ಥಳೀಯ ಸಂಸ್ಥೆಗಳಾದ ಉಡುಪಿ ನಗರ ಸಭೆ, ಕಾಪು ಪುರಸಭೆ, ಕಾರ್ಕಳ ಪುರಸಭೆ, ಕುಂದಾಪುರ ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ್ನು ಸಂಪರ್ಕಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಗಳನ್ನು ಪಡೆದುಕೊಳ್ಳಬೇಕು. ಸ್ಪರ್ಧಿಗಳು ಚಿತ್ರೀಕರಿಸಿರುವ ವೀಡಿಯೋವನ್ನು ಆನ್‌ಲೈನ್ ಮೂಲಕ ಸೆಪ್ಟೆಂಬರ್ 15ರೊಳಗೆ ಅಪ್‌ ಲೋಡ್ ಮಾಡಬಹುದು.

ಕಿರುಚಿತ್ರ ಸ್ಪರ್ಧೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಸ್ಪರ್ಧಾರ್ಥಿಗಳ ಫಲಿತಾಂಶವನ್ನು ಕೇಂದ್ರ ಸರಕಾರ ಸೆ.30ರಂದು ಪ್ರಕಟಿಸಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಪ್ರಮಾಣ ಪತ್ರ ನೀಡಲಾಗುವುದು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಪ್ರಥಮ ಬಹುಮಾನ ರೂ 25,000(25 ಜನರಿಗೆ), ದ್ವಿತೀಯ ಬಹುಮಾನ ರೂ.20,000 (25 ಜನರಿಗೆ) ತೃತೀಯ ಬಹುಮಾನ ರೂ.12,500 (25 ಜನರಿಗೆ) ನಗದು ನೀಡಲಾಗುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು ಉಡುಪಿ ನಗರಸಭೆ ಕಚೇರಿ: 0820- 252306, ರಮೇಶ್ ವಿಷಯ ನಿರ್ವಾಹಕರು: 9686125791, ಕಾರ್ಕಳ ಪುರಸಭೆ ಕಚೇರಿ: 08258-235664, ಈಶ್ವರ್ ವಿಷಯ ನಿರ್ವಾಹಕರು: 9741815079, ಕುಂದಾಪುರ ಪುರಸಭೆ ಕಚೇರಿ: 08254-230410, ಗಣೇಶ್ ವಿಷಯ ನಿರ್ವಾಹಕರು:9880164369, ಕಾಪು ಪುರಸಭೆ ಕಚೇರಿ: 0820- 2551061, ಬಾಲೇಶ್ ವಿಷಯ ನಿರ್ವಾಹಕರು:9844666814, ಸಾಲಿಗ್ರಾಮ ಪಟ್ಟಣಪಂಚಾಯತ್ ಕಚೇರಿ:0820-2560229, ಚಂದ್ರಶೇಖರ್ ಸೋಮಯಾಜಿ ವಿಷಯ ನಿರ್ವಾಹಕರು:9480485696, ಜಿಲ್ಲಾ ನಗರಾಭಿವೃದ್ದಿ ಕೋಶ ಜಿಲ್ಲಾಧಿಕಾರಿಗಳ ಕಚೇರಿ ಉಡುಪಿ: 0820-2574933, ಕಾಶಿನಾಥ್ ಬಿ: 9164186704, ನಿತಿನ್ ಎನ್: 9964707349, ಮಮತ: 8722554852 ಇವರನ್ನು ಸಂಪರ್ಕಿಸಬಹುದು ಎಂದು ಯೋಜನ ನಿರ್ದೇಶಕರು ಜಿಲ್ಲಾ ನಗರಾಭಿವೃದ್ದಿ ಇವರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News