ಮೂಳೂರು: ದಫ್ ಕಮಿಟಿಯಿಂದ ಆ್ಯಂಬುಲೆನ್ಸ್ ಕೊಡುಗೆ

Update: 2021-08-02 16:45 GMT

ಕಾಪು : ಮೂಳೂರು ಜುಮಾ ಮಸೀದಿ ಅಧೀನದ ಅಂಜುಮಾನ್ ಖಾದಿಮುಲ್ ಮುಸ್ಲಿಮೀನ್ ದಫ್ ಕಮಿಟಿ ಮೂಳೂರು, ಇದರ 43 ನೇ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕರ ಸೇವೆಗಾಗಿ ಮೂಳೂರು ಜುಮಾ ಮಸೀದಿ ಆಡಳಿತ ಸಮಿತಿಗೆ ಆ್ಯಂಬುಲೆನ್ಸ್ ಹಸ್ತಾಂತರ ಕಾರ್ಯಕ್ರಮ ಸೋಮವಾರ ಮೂಳೂರು ಮಸೀದಿ ಆವರಣದಲ್ಲಿ ನಡೆಯಿತು.

ಮೂಳೂರು ಜುಮಾ ಮಸೀದಿ ಖತೀಬ್ ಪಿ.ಕೆ ಅಬ್ದುಲ್ ರಹ್ಮಾನ್ ಮದನಿ ದುವಾ ಪ್ರಾರ್ಥನೆ ನೆರವೇರಿಸಿದರು. ದಫ್ ಕಮಿಟಿ ಅಧ್ಯಕ್ಷ ವೈ.ಬಿ.ಸಿ ಅಹ್ಮದ್ ಬಾವ, ಮಸೀದಿ ಅಧ್ಯಕ್ಷರಾದ ಎಂ.ಎಚ್.ಬಿ ಮುಹಮ್ಮದ್ ಇವರಿಗೆ ಆ್ಯಂಬುಲೆನ್ಸ್ ಕೀ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ವೈ.ಬಿ.ಸಿ ಬಾವ, ದಫ್ ಸಂಸ್ಥೆ ಕಳೆದ 43 ವರ್ಷಗಳಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಸೇವೆಯಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದರು.

ಹಾಜಿ ಅಬ್ಬು ಮುಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಸೀದಿ ಗೌರವಾಧ್ಯಕ್ಷ ಮೌದಿನ್ ದರ್ಕಸ್, ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ, ಉಪಾಧ್ಯಕ್ಷರುಗಳಾದ ಸಯ್ಯದ್ ಮುರಾದ್ ಅಲಿ, ಜಿ.ಎಂ ಉಮರಬ್ಬ, ಮದರಸದ ಅಧ್ಯಕ್ಷ ಮನ್ಸೂರ್ ಮೆಕ್ಕಸ್, ಸಹಾಯಕ ಖತೀಬ್  ಹೈದರ್ ಅಹ್ಸನಿ, ದರ್ಗ ಕಮಿಟಿಯ ಅಧ್ಯಕ್ಷರುಗಳಾದ ಅನ್ವರ್ ಹಸನ್, ಎ.ಕೆ ಹಾಜಬ್ಬ, ರಿಸ್ಕ್ಯೂ ಟೀಮ್ ಚೆಯರ್‍ಮೆನ್ ಹಮೀದ್ ಅದ್ದು, ಕನ್ವಿನರ್ ಹಮೀದ್ ಗುಲಾಂ, ಮದನಿ ಎಂಗ್ ಮೆನ್ಸ್ ಅಧ್ಯಕ್ಷ ಸಫ್ವಾನ್ ಹಾಗು ಇನ್ನಿತರ ಪ್ರಮುಖರು ಭಾಗವಹಿಸಿದ್ದರು. ಕಾರ್ಯದರ್ಶಿ ಸಿದ್ದಿಕ್  ಕಾಪಿಕಾಡ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News