​ಕರಾವಳಿಯಲ್ಲಿ ಎನ್‌ಐಎ ಕೇಂದ್ರ ಸ್ಥಾಪನೆಗೆ ಒತ್ತಾಯ: ಸಚಿವ ಸುನೀಲ್ ಕುಮಾರ್

Update: 2021-08-06 16:35 GMT

ಉಡುಪಿ, ಆ.6: ಕರಾವಳಿ ಭಾಗದಲ್ಲಿ ರಾಷ್ಟ್ರವಿರೋಧಿ ಚಟುವಟಿಕೆಗೆ ಕುಮ್ಮಕ್ಕು ನೀಡಲಾಗುತ್ತಿದೆ. ಈ ಹಿಂದಿನಿಂದಲೂ ಅನೇಕ ಘಟನೆಗಳು ನಡೆದಿವೆ. ಆದುದರಿಂದ ಕರಾವಳಿ ಭಾಗದಲ್ಲಿ ಶಾಶ್ವತ ಎನ್‌ಐಎ ಕೇಂದ್ರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು. ಈ ಸಂಬಂಧ ಲೋಕಸಬಾ ಸದಸ್ಯರ ಜೊತೆ ಮಾತುಕತೆ ನಡೆಸಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿರಿಯಾ ಜೊತೆ ಕರಾವಳಿ ಸಂಪರ್ಕ ಅತ್ಯಂತ ಅಚ್ಚರಿ ತಂದಿದೆ. ಇದು ಅತ್ಯಂತ ಖಂಡನೀಯ ವಾದ ಸಂಗತಿ. ಭಯೋತ್ಪಾಧಕ ಕೃತ್ಯಕ್ಕೆ ಸಹಕಾರ ಕೊಟ್ಟವರ ಸಂಪೂರ್ಣ ವಿಚಾರಣೆ ಯಾಗಬೇಕು. ರಾಜ್ಯ ಸರಕಾರದಿಂದ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಸಿಎಂ ಬೊಮ್ಮಾಯಿ ಜೊತೆ ಕೂಡ ಚರ್ಚಿಸಲಾಗುವುದು. ಕರ್ನಾಟಕದಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸಲು ಬಿಡುವುದಿಲ್ಲ ಎಂದರು.

ಗ್ರಾಮೀಣಾಭಿವೃದ್ಧಿ ಖಾತೆಗೆ ಕೋಟ ಅಪೇಕ್ಷೆ ?

ಗ್ರಾಮೀಣ ಭಾಗದ ಜನಕ್ಕೆ ಕುಡಿಯುವ ನೀರು ಕೊಡುವ ಆಸೆ ಇದೆ. ಬಡವರಿಗೆ ಮನೆ, ಶೌಚಾಲಯ, ವಿದ್ಯುತ್ ನೀಡಲು ಅನುಕೂಲ ಆಗುವ ಖಾತೆ ಮೇಲೆ ಆಸಕ್ತಿ ಇದೆ. ವ್ಯಕ್ತಿಯ ಮಾನಸಿಕತೆ ಅರ್ಥ ಮಾಡಿಕೊಂಡು ಸಿಎಂ ಸ್ಥಾನಮಾನ ಕೊಡುತ್ತಾರೆ. ಕೊಟ್ಟ ಖಾತೆಯನ್ನು ಚೆನ್ನಾಗಿ ನಿಭಾಯಿಸುತ್ತೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಖಾತೆ ಬಗ್ಗೆ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರಿಂದ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್ ನಿಯಮಗಳನ್ನು ಇಟ್ಟುಕೊಂಡೆ ನಾವು ಕೆಲಸ ಮಾಡಬೇಕು. ಸಚಿವರಾಗಿ ಮೊದಲ ಬಾರಿ ಜಿಲ್ಲೆಗೆ ಬಂದಿದ್ದೇವೆ. ಕಾರ್ಯ ಕರ್ತರು, ಜನ ಬಹಳ ಉತ್ಸಾಹದಿಂದ ಅಭಿನಂದಿಸಲು ಬಂದಿದ್ದಾರೆ. ಆಗಿರುವ ಪ್ರಮಾದವನ್ನು ಸರಿಪಡಿಸಿಕೊಂಡು ಕೆಲಸ ಮಾಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News