ಉಡುಪಿ : ಆ.9ರಂದು ಕೋವಿಡ್ ಲಸಿಕೆ ಲಭ್ಯತೆ ವಿವರ

Update: 2021-08-08 16:22 GMT

ಉಡುಪಿ, ಆ.8: ಉಡುಪಿ ನಗರ ಪ್ರದೇಶದ ಆಸ್ಪತ್ರೆಗಳಲ್ಲಿ ಆ.9ರಂದು ಕೋವಿಡ್-19 ಪ್ರಥಮ ಮತ್ತು 2ನೆ ಡೋಸ್ ಲಸಿಕೆ ಲಭ್ಯ ಇವೆ.

ಅಜ್ಜರಕಾಡು ಜಿಲ್ಲಾಸ್ಪತ್ರೆ (ಉಡುಪಿ ಸೇಂಟ್ ಸಿಸಿಲಿ ಶಾಲೆ)ಯಲ್ಲಿ ಕೋವಿಶೀಲ್ಡ್ ಪ್ರಥಮ ಡೋಸ್- 100, ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ(ಮಣಿಪಾಲ ಮಾಧವ ಕೃಪಾ ಶಾಲೆ)ಯಲ್ಲಿ ಕೋವಿಶೀಲ್ಡ್ 2ನೇ ಡೋಸ್ -170, ಕೋವ್ಯಾಕ್ಸಿನ್ 2ನೇ ಡೋಸ್-20, ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ(ಅಲಂಕಾರ್ ಥಿಯೇಟರ್ ಬಳಿ)ದಲ್ಲಿ ಕೋವಿಶೀಲ್ಡ್ 2ನೇ ಡೋಸ್- 100, ಕುಕ್ಕಿಕಟ್ಟೆಯ ಎಫ್‌ಪಿಎಐ (ಇಂದಿರಾ ನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ)ಯಲ್ಲಿ ಕೋವಿಶೀಲ್ಡ್ 2ನೇ ಡೋಸ್- 100, ಉಡುಪಿ ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆಯಲ್ಲಿ ಬೆಳಿಗ್ಗೆ 10ರಿಂದ ಅಪರಾಹ್ನ 1ರವರೆಗೆ ಆ.20ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ 100 ಡೋಸ್ ಲಭ್ಯ ಇವೆ.

ಗ್ರಾಮೀಣ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬೇಕು ಎಂದು ಡಿಎಚ್‌ಓ ಡಾ.ನಾಗ ಭೂಷಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News