ಉಡುಪಿ : ಅವಧಿ ಮುಗಿದು 2ನೇ ಡೋಸ್‌ಗೆ ಕಾಯುತ್ತಿರುವವರು 34,000 ಮಂದಿ !

Update: 2021-08-09 16:49 GMT

ಉಡುಪಿ, ಆ.9: ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಅರ್ಹ 10,01,861 ಮಂದಿ ಕೊರೋನ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದ್ದು, ಇವರ ಪೈಕಿ ಮೊದಲ ಡೋಸ್ ಪಡೆಯಲು 4,70,874 ಹಾಗೂ ಎರಡನೇ ಡೋಸ್ ಪಡೆಯಲು 8,11,507 ಮಂದಿ ಬಾಕಿ ಇದ್ದಾರೆ. ಮೊದಲ ಡೋಸ್ ಪಡೆದು ಕೋವಿಶೀಲ್ಡ್ 86 ಹಾಗೂ ಕೋವ್ಯಾಕ್ಸಿನ್ ಒಂದು ತಿಂಗಳ ಅವಧಿ ಮುಗಿದು ಎರಡನೇ ಡೋಸ್ ಪಡೆಯಲು ಒಟ್ಟು 34 ಸಾವಿರ ಮಂದಿ ಕಾಯುತ್ತಿದ್ದಾರೆ.

ಉಡುಪಿ ಜಿಲ್ಲೆಗೆ ಜು.26ರಿಂದ ಆ.1ರವರೆಗೆ ಪ್ರತಿದಿನ ಸರಾಸರಿ 4757, ಜು.19-25ರವರೆಗೆ 2952, ಅದಕ್ಕಿಂತ ಹಿಂದೆ 6114 ಡೋಸ್‌ಗಳು ಬಂದಿವೆ. ಆ.1ರಂದು ಒಂದೇ ದಿನ ಜಿಲ್ಲೆಯಲ್ಲಿ ಅತ್ಯಂತ ಅಧಿಕ ಅಂದರೆ 28861 ಮಂದಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 69ಸಾವಿರ ವಿದ್ಯಾರ್ಥಿ ಗಳಿಗೆ ಲಸಿಕೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

43,330 ಹೆಚ್ಚುವರಿ ಡೋಸ್ 

ಜಿಲ್ಲೆಗೆ ಈವರೆಗೆ ಒಟ್ಟು 6,56,850 ಕೊರೋನ ಲಸಿಕೆಯ ಡೋಸ್ ಬಂದಿದ್ದು, ಅದರಲ್ಲಿ ಮೊದಲ ಡೋಸ್ 5,33,950 ಹಾಗೂ ಎರಡನೇ ಡೋಸ್ 1,94,433 ಆಗಿದೆ. ಕೆಲವು ವಯಲ್‌ನಲ್ಲಿ 10ರ ಬದಲು 11 ಬಂದ ಡೋಸ್‌ನ್ನು ಕೂಡ ಬಳಕೆ ನಮ್ಮಲ್ಲಿ ಮಾಡಿಕೊಳ್ಳಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಲಸಿಕೆ ವ್ಯರ್ಥ ಆಗುವ ಬದಲು ಹೆಚ್ಚುವರಿಯಾಗಿ 43,330 ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಡಿಎಚ್‌ಓ ತಿಳಿಸಿದ್ದಾರೆ.

ಖಾಸಗಿಯವರು ಹಣ ಕೊಟ್ಟು ಖರೀದಿಸುವ ಲಸಿಕೆಯ ವಿವರ ನಮ್ಮಲ್ಲಿ ಇರುವುದಿಲ್ಲ. ಆದರೆ ಅವರು ನೀಡಿದ ಲಸಿಕೆಯ ವಿವರ ನಮ್ಮಲ್ಲಿ ಇರುತ್ತದೆ. ಸದ್ಯ ಖಾಸಗಿಯಲ್ಲೂ ಬೇಕಾದಷ್ಟು ಲಸಿಕೆ ಲಭ್ಯತೆ ಇದೆ. ಮಣಿಪಾಲದ ಕೆಎಂಸಿ, ಬ್ರಹ್ಮಾವರ ಮಹೇಶ್ ಆಸ್ಪತ್ರೆ, ಕುಂದಾಪುರ ಚಿನ್ಮಯಿ ಆಸ್ಪತ್ರೆ, ಉಡುಪಿ ಟಿಎಂಎ ಪೈ ಆಸ್ಪತ್ರೆ, ಆದರ್ಶ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾುತ್ತದೆ ಎಂದು ಅವರು ಹೇಳಿದರು.

ಎಚ್‌ಸಿಡಬ್ಲುಗೆ ಶೇ. 99 ಡೋಸ್ 

ಜಿಲ್ಲೆಯ 23889 ಆರೋಗ್ಯ ಕಾರ್ಯಕರ್ತ(ಎಚ್‌ಸಿಡಬ್ಲು)ರ ಪೈಕಿ 23567 ಮಂದಿಗೆ ಮೊದಲ ಡೋಸ್ ನೀಡುವ ಮೂಲಕ ಶೇ.99 ಹಾಗೂ 19606 ಮಂದಿಗೆ ಎರಡನೇ ಡೋಸ್ ನೀಡುವ ಮೂಲಕ ಶೇ.82ರಷ್ಟು ಸಾಧನೆ ಮಾಡಲಾಗಿದೆ. ಜಿಲ್ಲೆಯ 8120 ಫ್ರಂಟ್‌ಲೈನ್ ವಾರಿಯರ್ಸ್‌ಗಳ ಪೈಕಿ 8078 ಮಂದಿಗೆ ಮೊದಲ ಡೋಸ್ ನೀಡುವ ಮೂಲಕ ಶೇ.99 ಹಾಗೂ 4058 ಮಂದಿಗೆ ಎರಡನೇ ಡೋಸ್ ನೀಡುವ ಮೂಲಕ ಶೇ.50ರಷ್ಟು ಸಾಧನೆ ಮಾಡಲಾಗಿದೆ.

18-44 ವರ್ಷದೊಳಗಿನ 5,88,000 ಮಂದಿ ಪೈಕಿ 1,88,139 ಮಂದಿಗೆ ಮೊದಲ ಡೋಸ್ ನೀಡುವ ಮೂಲಕ ಶೇ.28 ಸಾಧನೆ ಮಾಡಲಾಗಿದೆ ಹಾಗೂ 12584 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. 45 ವರ್ಷ ಮೇಲ್ಪಟ್ಟ 4,13,861 ಮಂದಿಯ ಪೈರಿ 3,18,217 ಮಂದಿಗೆ ಮೊದಲ ಡೋಸ್ ನೀಡುವ ಮೂಲಕ ಶೇ.75 ಹಾಗೂ 1,57,555 ಮಂದಿಗೆ ಎರಡನೇ ಡೋಸ್ ನೀಡುವ ಮೂಲಕ ಶೇ.37ರಷ್ಟು ಸಾಧನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News